ಕಾಸರಗೋಡು: ಲಯನ್ಸ್ ಕ್ಲಬ್ ಕಾಸರಗೋಡು ನೇತೃತ್ವದಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಕಾಸರಗೋಡು ಬೀರಂತಬೈಲಿನ ಲಯನ್ಸ್ ಸೇವಾ ಮಂದಿರದಲ್ಲಿ ಜರುಗಿತು. ಲಯನ್ ಪಿಎಂಜೆಎಫ್ ಎ.ವಿ. ವಾಮನ್ ಕುಮಾರ್ ಸಮಾರಂಭ ಉದ್ಘಾಟಿಸಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ರಾಜೇಂದ್ರ ಕುಂಟಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ವಕೀಲ ಕರುಣಾಕರನ್ ನಂಬಿಯಾರ್, ಡಾ.ರಾಘವೇಂದ್ರ ಭಟ್, ಬಿ.ಕುಞÂಕಣ್ಣನ್, ವಿ.ವೇಣುಗೋಪಾಲನ್, ಎಂ.ಎನ್.ರಾಜೀವ್. ಎನ್.ಟಿ.ಗಂಗಾಧರನ್, ಸುಷ್ಮಾ ರಾಧಾಕೃಷ್ಣನ್ ಉಪಸ್ಥಿತರಿದ್ದರು. ಎ.ದಾಮೋದರನ್ ಸ್ವಾಗತಿಸಿ, ಎ.ಪ್ರೇಮಜಿತ್ ವಂದಿಸಿದರು.
ಈ ಸಂದರ್ಭ ಸಂಘಟನೆ ನೂತನ ಪದಾಧಿಕಾರಿಗಳಾದ ಬಿ. ಕುಞÂಕಣ್ಣನ್ (ಅಧ್ಯಕ್ಷರು) ಎ. ಪ್ರೇಮ್‍ಜಿತ್ (ಕಾರ್ಯದರ್ಶಿ), ಎಂ. ಪ್ರಶೀಶ್ ಕುಮಾರ್ (ಕೋಶಾಧಿಕಾರಿ) ಅಧಿಕಾರ ವಹಿಸಿಕೊಮಡರು.




