ಕಾಸರಗೋದು: ಭತ್ತದ ಬೇಸಾಯ 'ನಾಟಿ ಉತ್ಸವ'ಕ್ಕೆ ಬೇಕಲ ಸನಿಹದ ಅರವತ್ ಮುಕ್ಕುಂಡು ಬಯಲಲ್ಲಿ ಚಾಲನೆ ನೀಡಲಾಯಿತು. ಪುಲರಿ ಅರಾವತ್ ನೇತೃತ್ವದಲ್ಲಿ ಉದುಮ ಗ್ರಾಮ ಪಂಚಾಯತ್, ಜೀವವೈವಿಧ್ಯ ನಿರ್ವಹಣಾ ಸಮಿತಿಯ ಸಹಯೋಗದೊಂದಿಗೆ ನಾಟಿ ಉತ್ಸವ ಆಯೋಜಿಸಲಾಗಿದೆ.
ನಾಟಿ ಉತ್ಸವದ ಅಂಗವಾಗಿ ಆಯೋಜಿಸಲಾದ ಚರ್ಚೆಯಲ್ಲಿ ಸಾಂಪ್ರದಾಯಿಕ ರೈತರು "ಭತ್ತದ ಗದ್ದೆ ಪರಿಸರ ವ್ಯವಸ್ಥೆ - ಪರಿಸರ ಮಹತ್ವ ಮತ್ತು ಸ್ಥಳೀಯ ಜ್ಞಾನ" ಎಂಬ ವಿಷಯದ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.
ಉದುಮ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ. ಲಕ್ಷ್ಮಿ ಸಮಾರಂಭ ಉದ್ಘಾಟಿಸಿದರು. ನಾಟಿ ಉತ್ಸವ ಸಮಿತಿ ಅಧ್ಯಕ್ಷ ಕೆ. ದಾಮೋದರನ್ ಅಧ್ಯಕ್ಷತೆ ವಹಿಸಿದ್ದರು. ಕರಣವರ್ಕೂಟದಲ್ಲಿ 30 ಸಾಂಪ್ರದಾಯಿಕ ರೈತರು ಮತ್ತು 40 ಮಕ್ಕಳು ಭಾಗವಹಿಸಿದ್ದರು.ಭತ್ತದ ಗದ್ದೆ ಪರಿಸರ ವ್ಯವಸ್ಥೆಯ ಸಾಂಪ್ರದಾಯಿಕ ಜ್ಞಾನದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಕೃಷಿ ವಲಯ ಎದುರಿಸುತ್ತಿರುವ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ರೂಪಿಸುವ ಅಗತ್ಯತೆಯ ಬಗ್ಗೆ ಚರ್ಚಿಸಲಾಯಿತು.ಸಭೆಯಲ್ಲಿ ಅಗತ್ಯತೆ ಹುಟ್ಟಿಕೊಂಡಿತು. ಸಂಚಾಲಕ ಜಯಪ್ರಕಾಶ್ ಸ್ವಾಗತಿಸಿದರು. ಉದುಮ ಕೃಷಿ ಅಧಿಕಾರಿ ವಿನೀತ್ ಪಿ.ವಿ. ಕಾರ್ಯಕ್ರಮ ನಿರೂಪಿಸಿದರು. ವಿನೋದ್ ಮೇಲ್ಪುರಂ ವಂದಿಸದಿರು.
ನಾಟಿ ಉತ್ಸವದ ಅಂಗವಾಗಿ ಭತ್ತದ ಗದ್ದೆಯಲ್ಲಿ ನೆಡಲಿರುವ ನೇಜಿ ಕಟ್ಟುಗಳನ್ನು ವಿದ್ಯಾರ್ಥಿಗಳು ಹೊಲಕ್ಕೆ ತಲುಪಿಸಿದರು. ವಿದ್ಯಾರ್ಥಿಗಳು, ಶಿಕ್ಷಕರು, ಊರವರು ನಾಟಿ ಉತ್ಸವದ ಪೂರ್ವಭಾವಿಯಾಘಿ ಆಯೋಜಿಸಲಾದ ಚರ್ಚೆ, ಸಂವಾದ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು.





