ಮಂಜೇಶ್ವರ: ಕೇರಳದ ಗ್ರಂಥಶಾಲಾ ಪಿತಾಮಹ ಪಿ.ಎನ್. ಪಣಿಕ್ಕರ್ ಇವರ ಸ್ಮರಣೆ ದಿನದ ಅಂಗವಾಗಿ ವಾಚನಾ ದಿನಾಚರಣೆ ಮತ್ತು ವಾಚನಾ ಸಪ್ತಾಹ ಉದ್ಘಾಟನಾ ಸಮಾರಂಭ ಮೀಯಪದವು ರಾಮಕೃಷ್ಣ ರಾವ್ ಸಭಾಂಗಣದಲ್ಲಿ ಗುರುವಾರ ಜರಗಿತು. ಶಾಲಾ ಪ್ರಭಾರ ಮುಖ್ಯೋಪಾಧ್ಯಾಯ ರಾಮಚಂದ್ರ ಕೆ.ಯಂ. ಔಪಚಾರಿಕವಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಪಿ.ಎನ್. ಪಣಿಕ್ಕರ್ ಬಗ್ಗೆ ಕೆಲವು ಮಾಹಿತಿಗಳನ್ನು ನೀಡಿದರು. ಅಧ್ಯಾಪಕ ಸುಶಾಂತ್ ಮಯ್ಯ ವಾಚನ ದಿನಾಚರಣೆಯ ಬಗ್ಗೆ ಮಾತನಾಡಿ ಪಿ.ಎನ್ ಪಣಿಕ್ಕರ್ ನಡೆದು ಬಂದ ಹಾದಿಯನ್ನು ಸವಿಸ್ತಾರವಾಗಿ ತಿಳಿಸಿದರು.
ಶಾಲಾ ಗ್ರಂಥಾಲಯ ಸಂಚಾಲಕಿ ಪ್ರತಿಭಾ ಟೀಚರ್ ಮಕ್ಕಳಿಗೆ ಪ್ರತಿಜೆÐಯನ್ನು ಬೋಧಿಸಿದರು ಮತ್ತು ವಾಚನಾ ಸಪ್ತಾಹದಂಗವಾಗಿ ನಡೆಯುವ ಸ್ಪರ್ಧೆಗಳ ಬಗ್ಗೆ ಮಾಹಿತಿ ನೀಡಿದರು. ಹಿರಿಯ ಪ್ರಾಥಮಿಕ ಶಾಲಾ ಸಂಪನ್ಮೂಲ ತಂಡದ ಸಂಚಾಲಕಿ ಶ್ರೀಲಕ್ಷ್ಮಿ ಮತ್ತು ಕಿರಿಯ ಪ್ರಾಥಮಿಕ ಶಾಲಾ ಸಂಪನ್ಮೂಲ ತಂಡದ ಸಂಚಾಲಕ ಸುನಿಲ್ ಕುಮಾರ್ ಯಂ. ಶುಭ ಹಾರೈಸಿದರು. ಪಿ.ಎನ್ ಪಣಿಕ್ಕರ್ ಕುರಿತಾದ ವೀಡಿಯೋ ಪ್ರದರ್ಶನ ಈ ಸಂದರ್ಭದಲ್ಲಿ ನಡೆಯಿತು. ಶಿಕ್ಷಕಿ ಶುಭ ಪಿ ಸ್ವಾಗತಿಸಿ, ಶಿಕ್ಷಕ ವಿಘ್ನೇಶ್ ಯಸ್ ವಂದಿಸಿದರು. ಶ್ರೀಕೃಷ್ಣ ಶರ್ಮ ಕೆ. ನಿರೂಪಿಸಿದರು.




.jpg)
.jpg)
