ಬದಿಯಡ್ಕ: ಬದಿಯಡ್ಕ ಗ್ರಾಮ ಪಂಚಾಯತಿಯ ನಾಡೋಜ ಡಾ. ಕವಿ ಕಯ್ಯಾರ ಕಿಂಞಣ್ಣ ರೈ ಸ್ಮಾರಕ ಸಾರ್ವಜನಿಕ ಗ್ರಂಥಾಲಯದಲ್ಲಿ ಪಿ.ಎನ್. ಪಣಿಕ್ಕರ್ ರವರ ಸಂಸ್ಮರಣಾ ದಿನವಾದ ಜೂ. 19ರಂದು ವಾಚನಾ ದಿನವನ್ನು ಆಚರಿಸಲಾಯಿತು.
ಗ್ರಂಥಾಲಯ ಸಮಿತಿಯ ಅಧ್ಯಕ್ಷ ರಾಜೀವ್ ಪಿ.ವಿ.ಡಿ. ಅಧ್ಯಕ್ಷತೆ ವಹಿಸಿದ್ದರು. ಕಥೆಗಾರ ಸಾಹಿತಿ ರಾಜನ್ ಮುನಿಯೂರು ಉದ್ಘಾಟಿಸಿದರು. ಜನಪ್ರತಿನಿಧಿ ಶ್ಯಾಮಪ್ರಸಾದ್ ಮಾನ್ಯ, ಹಿರಿಯ ನಾಗರಿಕರ ವೇದಿಕೆಯ ಅಧ್ಯಕ್ಷ, ನಿವೃತ್ತ ಮುಖ್ಯೋಪಾಧ್ಯಾಯ ಈಶ್ವರ ಭಟ್ ಪೆರುಮುಖ, ನಿವೃತ್ತ ಅಧ್ಯಾಪಕ ಚಂದ್ರಹಾಸನ್ ಮಾಸ್ತರ್, ಗ್ರಂಥಾಲಯ ಸಮಿತಿಯ ಖಜಾಂಜಿ ಹಮೀದ್ ಕೆಡೆಂಜಿ, ಬದಿಯಡ್ಕ ಪಂಚಾಯಿತಿ ಪರಿಶಿಷ್ಟ ಜಾತಿ ಸೇವಾ ಸಹಕಾರಿ ಸಂಘದ ನಿವೃತ್ತ ಕಾರ್ಯದರ್ಶಿ ಗೋಪಾಲ ಡಿ. ಮಾತನಾಡಿದರು. ಸಾವನ್ ಬಾರಡ್ಕ ಉಪಸ್ಥಿತರಿದ್ದರು. ಗ್ರಂಥಾಲಯ ಸಮಿತಿಯ ಕಾರ್ಯದರ್ಶಿ ಸುಂದರ ಬಾರಡ್ಕ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ರಾಮ ಪಟ್ಟಾಜೆ ವಂದಿಸಿದರು.




.jpg)
