ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿ ಮಂಜೇಶ್ವರ ಸನಿಹದ ಪೊಸೋಟ್ ಎಂಬಲ್ಲಿ ಕಾರುಡಿಕ್ಕಿಯಾಗಿ ವಾಮಂಜೂರು ಕಜೆ ನಿವಾಸಿ ಮಹಮ್ಮದ್ ಸಾದಿಕ್(40)ಮೃತಪಟ್ಟಿದ್ದಾರೆ. ಸೋಮವಾರ ತಡರಾತ್ರಿ ಮಹಮ್ಮದ್ ಸಾದಿಕ್ ರಸ್ತೆ ಅಡ್ಡದಾಟುತ್ತಿದ್ದ ಸಂದರ್ಭ ಮಂಜೇಶ್ವರದಿಂದ ಹೊಸಂಗಡಿ ಭಾಗಕ್ಕೆ ಸಂಚರಿಸುತ್ತಿದ್ದ ಇನ್ನೊವಾ ವಾಹನ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಗಂಭೀರ ಗಯಗೊಂಡಿದ್ದ ಇವರನ್ನು ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಗಿಸುವ ಹದಿಮಧ್ಯೆ ಸಾವು ಸಂಭವಿಸಿದೆ. ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.





