HEALTH TIPS

ಠಾಣೆಯಿಂದ ವಾರಂಟ್ ಅರೋಪಿ ಪರಾರಿ-ಪೊಲೀಸ್ ನಿರ್ಲಕ್ಷ್ಯ ಆರೋಪ

ಮಂಜೇಶ್ವರ: ವಾರಂಟ್ ಆರೋಪಿಯೊಬ್ಬ ಪೊಲಿಸ್ ವಶದಿಂದ ಪರಾರಿಯಾಗಿದ್ದು, ಈತನಿಗಾಗಿ ಹುಡುಕಾಟ ಆರಂಭಿಸಲಾಗಿದೆ. ಹೊಸಬೆಟ್ಟು ಸಲ್ಮಾ ಮಂಜಿಲ್ ನಿವಾಸಿ ಸಇದ್ದಿಕ್ ಸಾರಿಕ್ ಫರ್ಹಾನ್(29)ಪರಾರಿಯಾಗಿರುವ ವ್ಯಕ್ತಿ.

2019ರಲ್ಲಿ ಮಂಜೇಶ್ವರ ಠಾಣೆ ಪೊಲೀಸರು ದಾಖಲಿಸಿಕೊಂಡಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿ ಈತನ ವಿರುದ್ಧ ವಾರಂಟ್ ಹೊರಡಿಸಲಾಗಿತ್ತು. ಈ ಮಧ್ಯೆ ಆರೋಪಿಯನ್ನು ಭಾನುವಾರ ಸಂಜೆ ವಶಕ್ಕೆ ತೆಗೆದುಕೊಂಡು ಮಂಜೇಶ್ವರ ಠಾಣೆಯಲ್ಲಿ ಪೊಲೀಸರ ನಿಗಾದಲ್ಲಿಸಿದ್ದರು. ಈ ಸಂದರ್ಭ ಕುಡಿಯಲು ನೀರುಕೇಳಿದ್ದು, ನೀರು ತರಲು ಒಳಹೋಗುತ್ತಿದ್ದಂತೆ ಸೋಮವಾರ ನಸುಕಿಗೆ ಠಾಣೆಯಿಂದ ಪರಾರಿಯಾಗಿದ್ದಾನೆ. ಆರೋಪಿಯೊಬ್ಬನನ್ನು ನಿರ್ಲಕ್ಷ್ಯವಾಗಿ ಕೂಡಿಹಾಕಿರುವ ಪೊಲೀಸರ ಧೋರಣೆಯೂ ವ್ಯಾಪಕ ಟೀಕೆಗೆ ಕಾರಣವಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries