ಬದಿಯಡ್ಕ: ನೀರ್ಚಾಲು ಮೇಲಿನಪೇಟೆಯಲ್ಲಿ ರಸ್ತೆ ಅಡ್ಡ ದಾಟುತ್ತಿದ್ದ ಸಂದರ್ಭ ಬೈಕ್ ಡಿಕ್ಕಿಯಾಗಿ ಲಾಟರಿ ಮಾರಾಟಗಾರರೊಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ಕಣ್ಣೂರು ಅಲಂಗೋಡು ಕಾವಿಮಲೆ ನಿವಾಸಿ ಸಾಜು ಜಾರ್ಜ್(62)ಮೃತಪಟ್ಟವರು. ಸೋಮವಾರ ರಾತ್ರಿ ಅಪಘಾತ ಸಂಭವಿಸಿದ್ದು, ತಕ್ಷಣ ಇವರನ್ನು ಆಸ್ಪತ್ರೆಗೆ ದಾಖಲಿಸಿದರೂ ಜೀವ ಉಳಿಸಲು ಸಾಧ್ಯವಾಗಿರಲಿಲ್ಲ.
ಲಾಟರಿ ಮಾರಾಟ ನಡೆಸಿ ಜೀವನ ಸಾಗಿಸುತ್ತಿದ್ದರು. ಬದಿಯಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.





