ಕಾಸರಗೋಡು: ತೆಕ್ಕಿಲ್‍ನಲ್ಲಿ ಅನಧಿಕೃತವಾಗಿ ದಾಸ್ತನಿರಿಸಿದ್ದ ಭಾರಿ ಪ್ರಮಾಣದ ಗೋವಾ ನಿರ್ಮಿತ ವಿದೇಶಿ ಮದ್ಯ ವಶಪಡಿಸಿಕೊಂಡಿರುವ ಅಬಕಾರಿ ದಳ ಸಿಬ್ಬಂದಿ ಮಹಿಳೆಯನ್ನು ಬಂಧಿಸಿದ್ದಾರೆ. ತೆಕ್ಕಿಲ್ ಪರಂಬ ಚರುಗರ ನಿವಾಸಿ ವಿನೀತಾ(36)ಬಂಧಿತೆ. ಈಕೆ ಪತಿ ವಿನೋದ್‍ಕುಮಾರ್ ಪರಾರಿಯಾಗಿದ್ದು, ಈತನಿಗಾಗಿ ಹುಡುಕಾಟ ನಡೆಯುತ್ತಿದೆ. ತೆಕ್ಕಿಲ್ ಗ್ರಾಮದ ಚರುಗರ ಎಂಬಲ್ಲಿ ಕಾಸರಗೋಡು ಅಬಕಾರಿ ಎನ್‍ಫೋರ್ಸ್‍ಮೆಂಟ್ ಆಂಡ್ ಆ್ಯಂಟಿ ನಾರ್ಕೋಟಿಕ್ ಸಪೆಶ್ಯಲ್ ಸ್ಕ್ವೇಡ್ ಅಸಿ. ಇನ್ಸ್‍ಪೆಕ್ಟರ್ ಸಿ.ಕೆ.ವಿ ವಿನೋದ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.
ಖಚಿತ ಮಾಹಿತಿಯನ್ವಯ ಕಾರ್ಯಾಚರಣೆ ನಡೆಸಲಾಗಿದ್ದು, 20 ಬಾಕ್ಸ್‍ನಲ್ಲಿ ದಾಸ್ತಾನಿರಿಸಿದ್ದ 175.68ಲೀ. ಮದ್ಯ ವಶಪಡಿಸಿಕೊಳ್ಳಲಾಗಿದೆ. ವಿನೋದ್‍ಕುಮಾರ್ ಇತ್ತೀಚೆಗೆ ಮಂಜೇಶ್ವರದಲ್ಲಿ ಅಬಕಾರಿ ತಪಸಣಾ ಕೇಂದ್ರದಲ್ಲಿ 2484ಲೀ. ಗೋವನಿರ್ಮಿತ ವಿದೇಶಿ ಮದ್ಯ ವಶಪಡಿಸಿಕೊಂಡ ಪ್ರಕರಣದಲ್ಲೂ ಅರೊಪಿಯಗಿರುವುದಾಗಿ ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣ ಕಾಸರಗೋಡು ರೇಂಜ್ ಅಬಕಾರಿ ಕಚೇರಿಗೆ ಹಸ್ತಾಂತರಿಸಲಾಗಿದೆ.





