HEALTH TIPS

ಐಸಿಎಆರ್-ಸಿಪಿಸಿಆರ್‍ಐನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಕಾಸರಗೋಡು: ಅಂತಾರಾಷ್ಟ್ರೀಯ ಯೋಗ ದಿನವನ್ನು ಕಾಸರಗೋಡಿನ ಐಸಿಎಆರ್-ಸಿಪಿಸಿಆರ್‍ಐನಲ್ಲಿ ಆಚರಿಸಲಾಯಿತು.  ಐಸಿಎಆರ್-ಸಿಪಿಸಿಆರ್‍ಐ ನಿರ್ದೇಶಕ ಡಾ. ಕೆ.ಬಿ. ಹೆಬ್ಬಾರ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಆರ್ಟ್ ಆಫ್ ಲಿವಿಂಗ್ ತರಬೇತುದಾರೆ ಶ್ರೀಲತಾ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ದಿನನಿತ್ಯದ ಜೀವನದಲ್ಲಿ ಯೋಗಾಭ್ಯಾಸ ಮಾಡುವುದರಿಂದ ನಮಗಾಗುವ ಪ್ರಯೋಜನಗಳು ಅದರಲ್ಲೂ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಏಕಾಗ್ರತೆ ಮತ್ತು ಒತ್ತಡವನ್ನು ಕಡಿಮೆ ಮಾಡುವಲ್ಲಿ ಹೇಗೆ ಸಹಾಯ ಮಾಡುತ್ತದೆ ಎಂಬ ಬಗ್ಗೆ ಮಾಹಿತಿ ನೀಡಿರು. ನಂತರ, ಒಂದು ಸಂಕ್ಷಿಪ್ತ ಪ್ರಾಯೋಗಿಕ ಅವಧಿಯಲ್ಲಿ 'ಸೂರ್ಯನಮಸ್ಕಾರ'ವನ್ನು ಪ್ರದರ್ಶಿಸಿ,  ಕೆಲವು ಪ್ರಮುಖ ಯೋಗ ಭಂಗಿಗಳನ್ನು ಸಭೆಗೆ ವಿವರಿಸಿದರು. 

ಕೇಂದ್ರೀಯ ವಿದ್ಯಾಲಯ-1ರ ಪ್ರಾಂಶುಪಾಲ ಕೆ.ಪಿ. ಸುಧಾಕರನ್  ಉಪಸ್ಥಿತರಿದ್ದರು. ವಿದ್ಯಾಲಯದ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಐಸಿಎಆರ್-ಸಿಪಿಸಿಆರ್‍ಐ ಸಿಬ್ಬಂದಿ ಸೇರಿದಂತೆ  150ಕ್ಕೂ ಹೆಚ್ಚುಮಂದಿ ಸದಸ್ಯರು ಇದರಲ್ಲಿಯೋಗ ಕಾರ್ಯಕ್ರಮದಲ್ಲಿಪಾಲ್ಗೊಂಡಿದ್ದರು. ಹಿರಿಯ ವಿಜ್ಞಾನಿ ಡಾ.ಪ್ರತಿಭಾ ಪಿ ಎಸ್ ಸ್ವಾಗತಿಸಿದರು.  ನಾರಾಯಣ ನಾಯ್ಕ್ ವಂದಿಸಿದರು.





 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries