ಕಾಸರಗೋಡು: ಚೆರ್ಕಳದಿಂದ ಕಾಞಂಗಾಡು ಭಾಗಕ್ಕೆ ಸಂಚರಿಸುವ ಬೇವಿಂಜೆ, ತೆಕ್ಕಿಲ್ ಭಾಗದಲ್ಲಿ ಭೂಕುಸಿತ ಸಂಭವಿಸಿರುವ ಪರಿಣಾಮ ಈ ಹಾದಿಯಾಗಿ ಖಾಸಗಿ ಬಸ್‍ಗಳ ಸಂಚಾರವನ್ನು ಸ್ಥಗಿತಗೊಳಿಬೇಕಾಗಿ ಸ್ಥಗಿತಗೊಳಿಸಬೇಕಾಗಿ ಬಂದಿರುವ ಹಿನ್ನೆಲೆಯಲ್ಲಿ ಬಸ್ ಮಾಲಿಕರು ಹೆಚ್ಚಿನ ಆರ್ಥಿಕ ನಷ್ಟ ಅನುಭವಿಸುತ್ತಿದ್ದು, ಈ ಬಗ್ಗೆ ಸಮಾಲೋಚಿಸಲು ತುರ್ತು ಸಭೆಕಾಸರಗೋಡಿನ ಹೊಸ ಬಸ್ ನಿಲ್ದಾಣ ಸಂಕೀರ್ಣದಲ್ಲಿರುವ ಬಸ್ ನಿರ್ವಾಹಕರ ಒಕ್ಕೂಟದ ಕಚೇರಿಯಲ್ಲಿ ಜೂ. 24ರಂದು ಬೆಳಗ್ಗೆ 11ಕ್ಕೆ ಜರುಗಲಿದೆ. ಪ್ರಸಕ್ತ ರೂಟಲ್ಲಿ ಸಂಚರಿಸುವ ಖಾಸಗಿ ಬಸ್‍ಗಳ ಎಲ್ಲಾ ಮಾಲಿಕರೂ ತುರ್ತು ಸಭೆಯಲ್ಲಿ ಹಾಜರಿರುವಂತೆ ಒಕ್ಕೂಟ ಪ್ರಕಟಣೆ ತಿಳಿಸಿದೆ.


