HEALTH TIPS

ಚೆರ್ವತ್ತೂರು ಐಟಿಐ ಆಡಳಿತ ಬ್ಲಾಕ್‍ನ ನೂತನ ಕಟ್ಟಡ ಉದ್ಘಾಟನೆ

ಕಾಸರಗೋಡು: ಚೆರುವತ್ತೂರು ಐಟಿಐನಲ್ಲಿ ಹೆಚ್ಚಿನ ಕೋರ್ಸ್‍ಗಳನ್ನು ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು  ಎಂದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಒ.ಆರ್. ಕೇಳು ತಿಳಿಸಿದ್ದಾರೆ.  ಅವರು ಚೆರುವತ್ತೂರು ಐಟಿಐ ಆಡಳಿತ ಬ್ಲಾಕ್‍ನ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ಪ್ರಸಕ್ತ ಚೆರುವತ್ತೂರು ಐಟಿಐನಲ್ಲಿ ಜಾರಿಯಲ್ಲಿರುವ ಕೋರ್ಸ್‍ನ ಹೊರತಾಗಿ,   ರಾಜ್ಯ ಸರ್ಕಾರದ ಹೊಸ ಕೌಶಲ್ಯ ಅಭಿವೃದ್ಧಿ ಯೋಜನೆಯಾದ ವಿಜ್ಞಾನ ಕೇರಳದ ಅಂಗವಾಗಿ   ಹೆಚ್ಚಿನ ಕೋರ್ಸ್ ಪ್ರಾರಂಭಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು. ಭವಿಷ್ಯದಲ್ಲಿ ಕೌಶಲ್ಯ ಅಭಿವೃದ್ಧಿಗೆ ಹೆಚ್ಚಿನ ಪ್ರಾಶಸ್ತ್ಯ ಕಲ್ಪಿಸುವ ನಿಟ್ಟಿನಲ್ಲಿ  ಸರ್ಕಾರ ವಿಜ್ಞಾನ ಕೇರಳ ಯೋಜನೆಯನ್ನು ಮುಂದುವರಿಸುತ್ತಿದೆ. ಅದರ ರಾಜ್ಯ, ಜಿಲ್ಲಾ ಮತ್ತು ಬ್ಲಾಕ್ ಮಟ್ಟದ ಸಮಿತಿಗಳನ್ನು ಈಗಾಗಲೇ ರಚಿಸಲಾಗಿದೆ ಮತ್ತು ಕೆಲಸವೂ ಪ್ರಾರಂಭಗೊಂಡಿದೆ. ಎಂ.ಟಿ.ಐ. ಅನೇಕ ಸಣ್ಣ ಮತ್ತು ದೊಡ್ಡ ಕೋರ್ಸ್‍ಗಳನ್ನು ನೀಡುತ್ತಿದ್ದು, ಇದಕ್ಕೆ ಐಟಿಐ ಮೂಲಕ ಹಣವನ್ನು ಒದಗಿಸಲಾಗುವುದು ಎಂದು ಸಚಿವರು ತಿಳಿಸಿದರು.

ಶಾಸಕ ಎಂ. ರಾಜಗೋಪಾಲನ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿದ್ದರು. ಸಂಸದರ ನಿಧಿಯಿಂದ ಬಂದ ಹಣವನ್ನು ಬಳಸಿಕೊಂಡು ಐಟಿಐಗೆ ಐದು ಕಂಪ್ಯೂಟರ್ ಒದಗಿಸಲಾಗುವುದು ಎಂದು ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ತಿಳಿಸಿದರು.  ಚೆರುವತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಿ.ವಿ. ಪ್ರಮೀಳಾ, ನೀಲೇಶ್ವರಂ ಬ್ಲಾಕ್ ಸದಸ್ಯೆ ಕೆ. ವಲ್ಲಿ, ಚೆರುವತ್ತೂರು ಗ್ರಾಮ ಪಂಚಾಯತ್ ಸದಸ್ಯರಾದ ಕೆ. ಶ್ರೀಧರನ್ ಮತ್ತು ಮಹೇಶ್ ವೆಂಗಟ್, ಉತ್ತರ ವಲಯ ತರಬೇತಿ ನಿರೀಕ್ಷಕ ಎ. ಬಾಬುರಾಜನ್, ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ ಸಲಹಾ ಸಮಿತಿ ಸದಸ್ಯ ಮಾಧವನ್ ಒರಿಯಾರ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.  ಮಾತನಾಡಿದರು. ಪರಿಶಿಷ್ಟ ಜಾತಿ ಅಭಿವೃದ್ಧಿ ಇಲಾಖೆಯ ಉತ್ತರ ಪ್ರದೇಶದ ಉಪ ನಿರ್ದೇಶಕ ಕೆ.ಕೆ. ಶಾಜು ಸ್ವಾಗತಿಸಿದರು. ಲೋಕೋಪಯೋಗಿ ಕಟ್ಟಡ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಎಂ. ಜಗದೀಶ್ ವರದಿ ಮಂಡಿಸಿದರು. ಜಿಲ್ಲಾ ಪರಿಶಿಷ್ಟ ಜಾತಿ ಅಭಿವೃದ್ಧಿ ಅಧಿಕಾರಿ-ಪ್ರಭಾರಿ ಪಿ.ಮಿನಿ ವಂದಿಸಿದರು.



-------

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries