ಮಳೆಗಾಲ ಬಂದಾಗ ಬಟ್ಟೆ ಒಣಗಿಸುವುದು ದೊಡ್ಡ ಕೆಲಸ. ಹೊರಗಡೆ ಹಾಕುವುದು ಅಸಾಧ್ಯ. ಗಾಳಿ ಬೀಸದಿದ್ದರೆ ಅವು ಬೇಗನೆ ಒಣಗಲ್ಲ. ಹೀಗಾಗಿ, ಬಟ್ಟೆ ಗಬ್ಬು ನಾರುತ್ತಿವೆ. ಈ ಬಟ್ಟೆಗಳನ್ನು (clothes) ಧರಿಸಿ ಹೊರಗೆ ಹೋಗಲು ತುಂಬಾ ಮುಜುಗರ. ಈ ಪ್ರಾಬ್ಲಂ ತಪ್ಪಿಸಲು, ಕೆಲವು ಟ್ರಿಕ್ ಫಾಲೋ ಮಾಡಬಹುದು. ಹೌದು, ಎಷ್ಟೇ ಮಳೆ ಬರುತ್ತಿರಲಿ (rainy season) ಅಥವಾ ನಿಮ್ಮ ಬಟ್ಟೆಗಳು ಎಷ್ಟೇ ಒದ್ದೆಯಾಗಿರಲಿ.. ಈ ಸರಳ ಟ್ರಿಕ್ಸ್ ಪಾಲಿಸಿದರೆ, ನಿಮ್ಮ ಬಟ್ಟೆಗಳು ಬೇಗನೆ ಒಣಗುತ್ತವೆ. ಜೊತೆಗೆ ಕೆಟ್ಟ ವಾಸನೆ ಬರೋದೇ ಇಲ್ಲ. ಹಾಗಿದ್ರೆ, ಬನ್ನಿ ಆ ಸಲಹೆಗಳು ಯಾವುವು? ನೀವು ಇವುಗಳನ್ನು ಹೇಗೆ ಅನುಸರಿಸಬೇಕು? ಎನ್ನುವುದನ್ನು ತಿಳಿಯೋಣ.
ಮನುಷ್ಯನ ಗುಣವೇ ಹೀಗೆ! ಹೆಚ್ಚು ಬಿಸಿಲು ಇರುವಾಗ, ಇನ್ನೂ ಎಷ್ಟು ದಿನ ಈ ರಣ ಬಿಸಿಲು ಅಂತಾನೆ. ಬೇಗ ಮಳೆ (rain) ಬಂದರೆ ಚೆನ್ನಾಗಿರುತ್ತಿತ್ತು ಅಂತ ಗೊಣಗುತ್ತಾನೆ. ಮಳೆಗಾಲ ಶುರುವಾದ ಬಳಿಕವೂ ಇದೇ ತಗಾದೆ. ಹೌದು, ಮಳೆ ಬರುವಾಗ ಸ್ವಲ್ಪ ಹೊರಗೆ ಹೋದರೆ ಬಟ್ಟೆಗಳೆಲ್ಲಾ ಒದ್ದೆಯಾಗುತ್ತವೆ. ನೀವು ಛತ್ರಿ ಅಥವಾ ರೈನ್‌ಕೋಟ್‌ಗಳನ್ನು ಬಳಸಿದರೂ, ಒದ್ದೆಯಾಗುವುದನ್ನು ತಪ್ಪಿಸುವುದು ಅಸಾಧ್ಯ. ಒದ್ದೆ ಬಟ್ಟೆಗಳನ್ನು ಒಣಗಿಸುವುದು ದೊಡ್ಡ ಸವಾಲೇ ಸರಿ. ಮಳೆಗಾಲ ಬಂದರೆ ಇದು ನಿರಂತರ ಸಮಸ್ಯೆ. ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿರುವ ಕಾರಣ, ಬಟ್ಟೆಗಳು ಬೇಗ ಒಣಗುವುದಿಲ್ಲ. ಒಣಗಿಸದಿದ್ದರೆ ಗಬ್ಬು ವಾಸನೆ ಬರುತ್ತದೆ. ಈ ಸಮಸ್ಯೆ ತಪ್ಪಿಸಲು, ಕೆಲವು ಈ ಟ್ರಿಕ್ ಪಾಲಿಸಿ.

ಮನೆಯಲ್ಲಿ ಬಟ್ಟೆ ಒಣಗಿಸುವುದು ಒಳ್ಳೆಯದಲ್ಲ
ಮಳೆಗಾಲದಲ್ಲಿ ಹೊರಗಡೆ ಬಟ್ಟೆಗಳನ್ನು ಒಣಗಿಸುವುದು ಅಸಾಧ್ಯ. ಹೀಗಾಗಿ ನೀವು ಅವುಗಳನ್ನು ಮನೆಯಲ್ಲಿಯೇ ಒಣಗಿಸಬೇಕು. ಪ್ರತಿ ಬಾರಿಯೂ ಡ್ರೈ ಕ್ಲೀನಿಂಗ್ ಮಾಡಲು ಸಾಧ್ಯವಿಲ್ಲ. ಆದಾಗ್ಯೂ, ಮನೆಯಲ್ಲಿ ಬಟ್ಟೆಗಳನ್ನು ಒಣಗಿಸುವುದು ಒಳ್ಳೆಯದಲ್ಲ. ಒಗೆದ ಬಟ್ಟೆಗಳಿಂದ ನೀರು ತೊಟ್ಟಿಕ್ಕುತ್ತದೆ. ಇವು ಮನೆಯ ಗೋಡೆಗಳ ಮೇಲೆ ಬೀಳುತ್ತವೆ. ತೇವಾಂಶ ಕ್ರಮೇಣ ಹೆಚ್ಚಾಗುತ್ತದೆ. ಇದರಿಂದ ಗೋಡೆಗಳಿಗೆ ಹಾನಿ ಕಟ್ಟಿಟ್ಟ ಬುತ್ತಿ. ನೀರು ಹೆಂಚುಗಳ ಮೇಲೆ ಬಿದ್ದರೂ, ಅವು ಬೇಗನೆ ಹಾಳಾಗುತ್ತವೆ. ತೇವಾಂಶ ಹೆಚ್ಚಾದಂತೆ ಬ್ಯಾಕ್ಟೀರಿಯಾಗಳು ಬೆಳೆಯುತ್ತವೆ. ನೀವು ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡರೆ, ಈ ಸಮಸ್ಯೆಗಳಿಲ್ಲದೆ ಬಟ್ಟೆಗಳನ್ನು ಒಣಗಿಸಬಹುದು.
ಬಟ್ಟೆಗಳು ಬೇಗನೆ ಒಣಗಲು ಏನು ಮಾಡಬೇಕು?
ಬಟ್ಟೆಗಳನ್ನು ತೊಳೆದ ಬಳಿಕ ಅವುಗಳನ್ನು ಕೆಲವೊಮ್ಮೆ ಒಣಗಲು ನೇತುಹಾಕಲಾಗುತ್ತದೆ. ಆದರೆ, ನಿಮ್ಮ ಬಟ್ಟೆಗಳು ಬೇಗನೆ ಒಣಗಬೇಕು ಅಂತ ಬಯಸಿದರೆ, ಇದನ್ನು ಮಾಡಬಾರದು. ಬಟ್ಟೆಗಳನ್ನು ಸಾಧ್ಯವಾದಷ್ಟು ಗಟ್ಟಿಯಾಗಿ ಹಿಂಡಬೇಕು. ಬಟ್ಟೆಯಲ್ಲಿರುವ ಎಲ್ಲಾ ನೀರು ಹೊರಗೆ ಹೋಗಿದ್ಯಾ ಅಂತ ಖಚಿತಪಡಿಸಿಕೊಳ್ಳಿ. ಈ ರೀತಿ ಬಟ್ಟೆಯಲ್ಲಿರುವ ಎಲ್ಲಾ ನೀರು ಹೊರಗೆ ಹೋದರೆ, ಅವುಗಳು ಬೇಗನೆ ಒಣಗುತ್ತದೆ. ಇದನ್ನು ಮಾತ್ರ ಮಾಡಿದರೆ ಸಾಕಾಗಲ್ಲ.
ಬಟ್ಟೆಗಳು ಬೇಗ ಒಣಗಬೇಕೆಂದು ಬಯಸಿದರೆ, ನೀವು ಮಾಡಬೇಕಾದ ಇನ್ನೊಂದು ಕೆಲಸ ಇದೆ. ಸ್ವಲ್ಪ ಗಾಳಿ ಇರುವ ಕೋಣೆಯಲ್ಲಿ ಬಟ್ಟೆಗಳನ್ನು ಒಣಗಿಸಬಹುದು. ಆ ರೂಮ್‌ನಲ್ಲಿ ಹೀಟರ್ ಅಳವಡಿಸಬೇಕು. ಹೀಟರ್ ಇಲ್ಲದಿದ್ದರೆ, ಒಂದು ಫ್ಯಾನ್ ಅನ್ನು ಆನ್ ಮಾಡಿ. ನೀವು ಏನೇ ಮಾಡಿದರೂ, ಆ ಬಟ್ಟೆಗಳು ಗಾಳಿ ಬೀಸದಂತೆ ನೋಡಿಕೊಳ್ಳಬೇಕು. ಟೇಬಲ್ ಫ್ಯಾನ್ ಬಳಸಿದರೂ ಸಾಕು. ನೀವು ಹೀಗೆ ಮಾಡಿದರೆ, ಗಾಳಿಯು ಬಟ್ಟೆಗಳನ್ನು ಬೇಗನೆ ಒಣಗಿಸುತ್ತದೆ.
ಹೇರ್ ಡ್ರೈಯರ್ ಬಳಸಿ
ಬಟ್ಟೆಗಳನ್ನು ಒಣಗಿಸುವಾಗ ನೀವು ಸ್ವಲ್ಪ ಯೋಚಿಸಿ. ಕೆಲವರು ಕೂದಲನ್ನು ಒಣಗಿಸಲು ಹೇರ್ ಡ್ರೈಯರ್ ಬಳಸುತ್ತಾರೆ. ಬಟ್ಟೆಗಳನ್ನು ಒಣಗಿಸಲು ಇದನ್ನು ಸಹ ಬಳಸಬಹುದು. ಆದರೆ, ಅದನ್ನು ಬಟ್ಟೆಗೆ ತುಂಬಾ ಹತ್ತಿರದಲ್ಲಿ ಬಳಸುವುದು ಒಳ್ಳೆಯದಲ್ಲ. ನೀವು ಹೇರ್ ಡ್ರೈಯರ್ ಸ್ವಲ್ಪ ದೂರ ಇಟ್ಟು, ಆನ್ ಮಾಡಬೇಕು. ಸ್ವಲ್ಪ ಹೊತ್ತು ಬಿಟ್ಟರೆ, ಅದು ಬೇಗ ಒಣಗಬಹುದು.
ಐರನ್ ಮಾಡುವುದು
ಬಹುತೆಕ ಜನರು ಅನುಸರಿಸುವ ಸಲುಭ ಟ್ರಿಕ್. ಬಟ್ಟೆಗಳು ತುಂಬಾ ಒದ್ದೆಯಾಗಿದ್ದರೆ (wet clothes), ತಕ್ಷಣ ಅವುಗಳನ್ನು ಇಸ್ತ್ರಿ ಮಾಡಬಹುದು. ಇದು ಬಟ್ಟೆಗಳಲ್ಲಿನ ವಾಸನೆ ಕಡಿಮೆ ಮಾಡುತ್ತದೆ. ಹಾಗೆಯೇ ಒಲೆಯಲ್ಲಿಯೂ ಸುಲಭವಾಗಿ ಒಣಗಿಸಬಹುದು. ಅದಕ್ಕೂ ಮೊದಲು, ಓವನ್ ಅನ್ನು (ಕನಿಷ್ಠ 100 ಡಿಗ್ರಿ) ಕಾಯಿಸಬೇಕು. ನಂತರ, ಅದನ್ನು ಆಫ್ ಮಾಡಿ. ಈ ಬಿಸಿ ಬಹಳ ಕಾಲ ಇರುತ್ತದೆ. ನಂತರ ಬಟ್ಟೆಗಳನ್ನು ಹಾಳೆಯ ಮೇಲೆ ಹಾಕಿ, ಒಲೆ ಮೇಲೆ ಇಡಬಹುದು. ಅವು ಸ್ವಲ್ಪ ಸಮಯದೊಳಗೆ ಒಣಗುತ್ತವೆ. ಅಪ್ಪಿತಪ್ಪಿಯಾದರೂ ಒವನ್ ಆನ್ ಮಾಡಿಟ್ಟು ಹೀಗೆ ಮಾಡಬೇಡಿ. ಎಲ್ಲಾ ಬಟ್ಟೆಗಳು ಸುಟ್ಟುಹೋಗುವ ಅಪಾಯವಿರುತ್ತದೆ.





