ಕಾಸರಗೋಡು: ರಂಗಚಿನ್ನಾರಿ ಕಾಸರಗೋಡು ಇದರ ಸಂಗೀತ ಘಟಕ ಸ್ವರಚಿನ್ನಾರಿ ವತಿಯಿಂದ 'ಅಂತಧ್ರ್ವನಿ-5'ಅನ್ವಯ ಖ್ಯಾತ ಹಿನ್ನೆಲೆ ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯ ಸಂಸ್ಮರಣಾರ್ಥ 'ಎಸ್.ಪಿ.ಬಿ ನಮನ' ಕಾರ್ಯಕ್ರಮ ಜೂ. 21ರಂದು ಮಧ್ಯಾಹ್ನ 2.15ಕ್ಕೆ ಕಾಸರಗೋಡಿನ ಕರಂದಕ್ಕಾಡು ಪದ್ಮಗಿರಿ ಕಲಾಕುಟೀರದಲ್ಲಿ ಜರುಗಲಿದೆ.
ಖ್ಯಾತ ಛಾಯಚಿತ್ರಗ್ರಾಹಕ ಕೆ. ಗಣೇಶ್ ಶೆಣೈ ಉದ್ಘಾಟಿಸುವರು. ಅಂತಧ್ರ್ವನಿ ಸಂಚಾಲಕ, ರಂಗಚಿನ್ನಾರಿ ನಿರ್ದೇಶಕ ಕಾಸರಗೋಡು ಚಿನ್ನಾ ಮೊದಲದವರು ಉಪಸ್ಥಿತರಿರುವರು.


