ಕಾಸರಗೋಡು: ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಬಳಕೆ ಮತ್ತು ಅಕ್ರಮ ಸಾಗಣೆ ವಿರೋಧಿ ದಿನದ ಅಂಗವಾಗಿ, ಕೇಂದ್ರ ಸರ್ಕಾರದ'ನಶಾ ಮುಕ್ತ್ ಭಾರತ್ ಯೋಜನೆ, ಜಿಲ್ಲಾ ಪೆÇಲೀಸ್ ಅಧೀನದಲ್ಲಿರುವ ವಿದ್ಯಾರ್ಥಿ ಪೆÇಲೀಸ್ ಕೆಡೆಟ್ ವತಿಯಿಂದ ಸೀನಿಯರ್ ಮತ್ತು ಸೂಪರ್ ಸೀನಿಯರ್ ಮಿಶ್ರ ಸೆವೆನ್ಸ್ ಫುಟ್‍ಬಾಲ್ ಪಂದ್ಯಾವಳಿ ಜರುಗಿತು.
ಅಂತಾರಾಷ್ಟ್ರೀಯ ಮಾದಕವಸ್ತು ವಿರೋಧಿ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಕಾಸರಗೋಡು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾಟಿಸಿದರು.
ಕಾರ್ಯಕ್ರಮಕ್ಕೆ ಮೊದಲು ಕಾಸರಗೋಡು ಕೇಂದ್ರೀಯ ವಿದ್ಯಾಲಯದ ಆವರಣದಿಂದ ವಿದ್ಯಾರ್ಥಿ ಪೆÇಲೀಸ್ ಕೆಡೆಟ್‍ಗಳ ಪಥಸಂಚಲನP ನಡೆಯಿತು. ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಬಿ.ವಿ. ವಿಜಯಭರತ್ ರೆಡ್ಡಿ ಐಪಿಎಸ್ ಚಾಲನೆ ನೀಡಿದರು. ಹೆಚ್ಚುವರಿ ಎಸ್ಪಿ ಸಿ.ಎಂ.ದೇವದಾಸನ್ ಅಧ್ಯಕ್ಷತೆ ವಹಿಸಿದ್ದರು. ಎಸ್.ಪಿ.ಸಿ. ಯೋಜನಾ ಕೋರ್ ಸಮಿತಿ ಸಂಚಾಲಕ ಟಿ. ತಂಬನ್ ಎಸ್.ಐ ಮತ್ತು ಸಿ. ಗೋಪಾಲಕೃಷ್ಣನ್ ಉಪಸ್ಥಿತರಿದದರು. ಜಿಲ್ಲಾ ಸಾಮಾಜಿಕ ನ್ಯಾಯ ಅಧಿಕಾರಿ ಆರ್ಯ ಪಿ ರಾಜ್ ಸ್ವಾಗತಿಸಿದರು.
ಕಾಸರಗೋಡು ಶೈಕ್ಷಣಿಕ ಜಿಲ್ಲೆಯ ತಂಡಗಳ ಸ್ಪರ್ಧೆ ಪೂರ್ತಿಗೊಂಡು, ಜೂ. 28ರಂದು ಅಂತಿಮ ಪಂದ್ಯಾಟ ಕಾಸರಗೋಡು ಪೆÇಲೀಸ್ ಮೈದಾನದ ಟರ್ಫ್ ಕೋರ್ಟ್‍ನಲ್ಲಿ ನಡೆಯಲಿದೆ.




