ಕಾಸರಗೋಡು : 110 ಕೆ.ವಿ ಮೈಲಾಟಿ-ವಿದ್ಯಾನಗರ ಫೀಡರ್‍ನ ಸಾಮಥ್ರ್ಯ ವರ್ಧನೆಯ ಭಾಗವಾಗಿ ನಡೆಯಲಿರುವ ಕಾಮಗಾರಿ ಹಿನ್ನೆಲೆಯಲ್ಲಿ ಜೂ. 26ರಿಂದ 29ರ ವರೆಗೆ ಬೆಳಗ್ಗೆ 9ರಿಂದ ಸಂಜೆ 5ರ ಕಾಲಾವಧಿಯಲ್ಲಿ 110 ಕೆವಿ ಸಬ್‍ಸ್ಟೇಷನ್‍ಗಳಾದ ವಿದ್ಯಾನಗರ, ಮುಳ್ಳೇರಿಯಾ, ಕುಬಣೂರ್, ಮಂಜೇಶ್ವರ ಮತ್ತು 33 ಕೆವಿ ಸಬ್‍ಸ್ಟೇಷನ್‍ಗಳಾದ ಕಾಸರಗೋಡು ನಗರ, ಬದಿಯಡ್ಕ, ಅನಂತಪುರ ಮತ್ತು ಪೆರ್ಲ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜಿನಲ್ಲಿ ಭಾಗಶಃ ವ್ಯತ್ಯಯವಾಗುವ ಸಾಧ್ಯತೆಯಿದೆ ಎಂದು ಮೈಲಾಟಿ ಮಾರ್ಗ ನಿರ್ವಹಣಾ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆ ತಿಳಿಸಿದೆ.





