ಕಾಸರಗೋಡು: ವ್ಯಕ್ತಿತ್ವ ವಿಕಸನ ಹಾಗೂ ನೂತನ ತಂತ್ರಜ್ಞಾನಗಳ ಅರಿವಿಗೆ ಓದು ಹೆಚ್ಚು ಸಹಕಾರಿ ಎಂಬುದಾಗಿ ಶಾಸಕ ಎನ್.ಎ ನೆಲ್ಲಿಕುನ್ನು ತಿಳಿಸಿದ್ದಾರೆ. ಅವರು ವಾಚನಾ ಸಪ್ತಾಹ ಅಂಗವಾಗಿ ಕಾಸರಗೋಡು ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಲಾದ ಜಿಲ್ಲಾ ಮಟ್ಟದ ವಾಚನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಓದುವ ಹವ್ಯಾಸದಿಂದ ಮನುಷ್ಯರನ್ನು ಸತ್‍ಚಿಂತನೆಯತ್ತ ಕೊಂಡೊಯ್ಯಲು ಸಹಕಾರಿಯಾಗುವುದು ಎಂದು ತಿಳಿಸಿದರು. ಸಾರ್ವಜನಿಕ ಸಂಪರ್ಕ ಇಲಾಖೆಯ ಜಿಲ್ಲಾ ವಾರ್ತಾ ಕಚೇರಿಯ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಮಲಯಾಳಂ ವಿಭಾಗದ ಅಧ್ಯಕ್ಷ ಡಾ. ಆರ್. ಚಂದ್ರಬೋಸ್ ಮುಖ್ಯ ಅತಿಥಿಯಾಗ ಭಾಗವಹಿಸಿ ಮಾತನಾಡಿ, ಓದುವಿಕೆ ವ್ಯಕ್ತಿಯನ್ನು ಬೌದ್ಧಿಕ ವಿಕಾಸದೆಡೆಗೆ ಕೊಂಡೊಯ್ಯುತ್ತದೆ. ಮನುಷ್ಯನ ಸಾಂಸ್ಕøತಿಕ ಬೆಳವಣಿಗೆಗೆ ಓದು ಹೆಚ್ಚು ಪ್ರಯೋಜನಕಾರಿ ಎಂದು ತಿಳಿಸಿದರು.
ಕಾಸರಗೋಡು ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ(ಎಡಿಎಂ) ಪಿ. ಅಖಿಲ್ ಓದುವ ದಿನದ ಸಂದೇಶ ನೀಡಿ ಪ್ರಮಾಣ ಬೋಧಿಸಿದರು. ಕಾಸರಗೋಡು ನಗರಸಭಾ ಅಧ್ಯಕ್ಷ ಅಬ್ಬಾಸ್ ಬೀಗಂ ಅಧ್ಯಕ್ಷತೆ ವಹಿಸಿದ್ದರು. ವಾರ್ಡ್ ಕೌನ್ಸಿಲರ್ ಡಿ. ರಂಜಿತಾ, ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿ ಆಗಸ್ಟೀನ್ ಬರ್ನಾರ್ಡ್, ಸಾಕ್ಷರತಾ ಮಿಷನ್ ಜಿಲ್ಲಾ ಸಂಯೋಜಕ ಪಿ.ಎನ್.ಬಾಬು, ಕಾಸರಗೋಡು ಜಿಎಚ್‍ಎಸ್‍ಎಸ್ ಪ್ರಾಂಶುಪಾಲ ಎ.ಉಷಾ ಉಪಸ್ಥಿತರಿದ್ದರು. ಜಿಲ್ಲಾ ಮಾಹಿತಿ ಅಧಿಕಾರಿ ಎಂ. ಮಧುಸೂದನನ್ ಸ್ವಾಗತಿಸಿದರು. ಸಹಾಯಕ ಸಂಪಾದಕಿ ಎ.ಪಿ. ದಿಲ್ನಾ ವಂದಿಸಿದರು.





