ಉಪ್ಪಳ: ಉಪ್ಪಳ ಗೇಟ್ ಸನಿಹ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಮತ್ತು ಮೀನು ಸಾಗಾಟದ ಲಾರಿ ಡಿಕ್ಕಿಯಾಗಿ ಕಾರು ಪ್ರಯಾಣಿಕೆ ಮೃತಪಟ್ಟಿದ್ದು, ಇತರ ಇಬ್ಬರು ಗಾಯಗೊಂಡಿದ್ದಾರೆ. ಮಂಗಳೂರು ಪಡೀಲ್ ಅಳಕ್ಕೆ ನಿವಾಸಿ ಪದ್ಮನಾಭ ಆಚಾರ್ಯ ಅವರ ಪತ್ನಿ ನವ್ಯಾ(34)ಮೃತಪಟ್ಟವರು. ಇವರ ಪತಿ ಪದ್ಮನಾಭ ಆಚಾರ್ಯ ಹಾಗೂ ಪುತ್ರ ಗಯಾನ್ ಗಾಯಗೊಂಡಿದ್ದರು.
ಅಪಘಾತ ನಡೆದ ತಕ್ಷಣ ಮೂರೂ ಮಂದಿಯನ್ನು ಮಂಗಳೂರಿನ ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನವ್ಯಾ ಅವರ ಜೀವ ಉಳಿಸಲು ಸಾಧ್ಯವಾಗಿರಲಿಲ್ಲ. ಕೋಳ್ಯೂರುಪದವಿನ ತಾಯಿಮನೆಗೆ ಪುತ್ರನೊಂದಿಗೆ ನವ್ಯಾ ಎರಡು ದಿವಸಗಳ ಹಿಂದೆ ಆಗಮಿಸಿದ್ದು, ಶುಕ್ರವಾರ ಬೆಳಗ್ಗೆ ಪದ್ಮನಾಭ ಅಚಾರ್ಯ ಅವರೂ ಮನೆಗೆ ಆಗಮಿಸಿ, ಅಲ್ಲಿಂದ ಮೂರೂ ಮಂದಿ ಕಾರಿನಲ್ಲಿ ಉಪ್ಪಳ ಪೇಟೆಗೆ ಆಗಮಿಸಿ ಕೋಳ್ಯೂರಿನ ಮನೆಗೆ ವಾಪಸಾಗುವ ಮಧ್ಯೆ ಅಪಘಾತ ಸಂಭವಿಸಿದೆ. ಅಪಘಾತದಿಂದ ಕಾರು ಸಂಪೂರ್ಣ ಜಖಂಗೊಂಡಿದೆ. ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.




.webp)

