ಕಾಸರಗೋಡು: ಅಬಕಾರಿ ದಳ ಅಧಿಕಾರಿಗೆ ಹಲ್ಲೆ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಅಪರಾಧಿ ಕುಂಬಳೆ ಕೊಯಿಪ್ಪಾಡಿ ಗ್ರಾಮದ ಕುಂಟಂಗೇರಡ್ಕ ನಿವಾಸಿ ಅಣ್ಣಿಪ್ರಭಾಕರ ಎಂಬಾತನಿಗೆ ಕಾಸರಗೋಡು ಅಡಿಶನಲ್ ಜಿಲ್ಲಾ ಹಾಗೂ ಸೆಶನ್ಸ್ ನ್ಯಾಯಾಲಯ(ದ್ವಿತೀಯ)ದ ನ್ಯಾಯಾಧೀಶೆ ಪ್ರಿಯ ಕೆ. ಅವರು ಎರಡು ವರ್ಷ ಜೈಲು ಶಿಕ್ಷೆ ಹಾಗೂ 20ಸಾವಿರ ರೂ. ದಂಡ ವಿಧಿಸಿದ್ದಾರೆ.
2021 ಏಪ್ರಿಲ್ 2ರಂದು ಅಣ್ಣಿಪ್ರಭಾಕರ್ ಮಾಲಿಕತ್ವದ ಕುಂಟಂಗೇರಡ್ಕದ ಹೋಟೆಲ್‍ನಲ್ಲಿ ಅನಧಿಕೃತವಾಗಿ ಮದ್ಯಮಾರಾಟ ನಡೆಸುತ್ತಿರುವ ಬಗ್ಗೆ ಲಭಿಸಿದ ಮಾಹಿತಿಯನ್ವಯ ತಪಾಸಣೆಗಾಗಿ ತೆರಳಿದ್ದ ಅಬಕಾರಿ ಅಧಿಕಾರಿ ವಿನೋದ್ ಅವರ ತಲೆಗೆ ಅಳತೆ ಸಾಮಗ್ರಿಯಿಂದ ಬಡಿದು ಗಾಯಗೊಳಿಸಿರುವ ಬಗ್ಗೆ ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.




