ಮುಳ್ಳೇರಿಯ: ಬೆಳ್ಳೂರು ಗ್ರಾಮ ಪಂಚಾಯತಿಯಲ್ಲಿ ಆಡಳಿತ ಮತ್ತು ನೌಕರರ ನೇತೃತ್ವದಲ್ಲಿ ಯೋಗ ದಿನವನ್ನು ಆಚರಿಸಲಾಯಿತು. ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಪಂಚಾಯತಿ ಅಧ್ಯಕ್ಷ ಶ್ರೀಧರ ಎಂ. ಉದ್ಘಾಟಿಸಿದರು. ಯೋಗ ಶಿಕ್ಷಕಿ ದೀಪಿಕಾ ಶೆಟ್ಟಿ ಯೋಗ ತರಗತಿಯನ್ನು ನಡೆಸಿಕೊಟ್ಟರು.
ಗ್ರಾ.ಪಂ. ಅಭಿವೃದ್ಧಿ ವ್ಯವಹಾರಗಳ ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಹಾಸ ರೈ, ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಜಯಕುಮಾರ್, ಪ್ರಭಾರ ಕಾರ್ಯದರ್ಶಿ ಜಿನೀಶ್ ಕುಮಾರ್, ಸದಸ್ಯರು, ವಿಇಒ ಪ್ರದೀಪ್ ಕುಮಾರ್, ಎಇ ತುಳಸಿಧರನ್ ಮತ್ತು ಪಂಚಾಯತಿ ನೌಕರರು ಭಾಗವಹಿಸಿದ್ದರು. ಈ ಸಂದರ್ಭ ತರಬೇತುದಾರೆ ದೀಪಿಕಾ ಶೆಟ್ಟಿ ಅವರನ್ನು ಗೌರವಿಸಲಾಯಿತು.




.jpg)
.jpg)
.jpg)
