ಮುಳ್ಳೇರಿಯ: ಕೇರಳದ ಅರಣ್ಯಗಳ ಅಭಿವೃದ್ದಿಪಡಿಸುವ ಸಲುವಾಗಿ ಕಾಡಿನಲ್ಲಿ ಆಹಾರ ಉತ್ಪನ್ನಗಳ ಲಭ್ಯತೆ ಖಾತರಿಪಡಿಸುವ ನಿಟ್ಡಿನಲ್ಲಿ ಅರಣ್ಯ ಇಲಾಖೆಯ ಪರಪ್ಪ ಸೆಕ್ಷನ್ ಸಿಬಂದಿಗಳ ನೇತೃತ್ವದಲ್ಲಿ ಪಂಜಿಕಲ್ಲು ಶಾಲೆಯಲ್ಲಿ ಬೀಜ ಬಿತ್ತುವ ಕಾರ್ಯಕ್ರಮ ನಡೆಯಿತು.
ಶಿಕ್ಷಕರು, ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಜೊತೆಗೂಡಿದರು. ಪಂಜಿಕಲ್ಲು ಅರಣ್ಯ ವಲಯದಲ್ಲಿ ಬೀಜ ಬಿತ್ತಲಾಯಿತು. ಮುಖ್ಯೋಪಾಧ್ಯಾಯ ವಿಷ್ಣುಪಾಲ.ಬಿ, ಹಿರಿಯ ಶಿಕ್ಷಕಿ ವಿಜಯಲಕ್ಷ್ಮಿ ಪಿ, ಅರಣ್ಯ ಇಲಾಖೆಯ ಅಧಿಕಾರಿಗಳಾದ ವಿನೋದ್ ಕುಮಾರ್, ಮಂಜುಶ, ಮಹೇಶ್, ಅರುಣ್, ಉದಯ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.




.jpg)
