ಬದಿಯಡ್ಕ: ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲೆಯ ಹಿರಿಯ ಪ್ರಾಥಮಿಕ ವಿಭಾಗದ ವಿವಿಧ ಕ್ಲಬ್ ಗಳ ಉದ್ಘಾಟನೆ ಶುಕ್ರವಾರ ನಡೆಯಿತು. ಹೈಯರ್ ಸೆಕೆಂಡರಿ ವಿಜ್ಞಾನ ಪ್ರಾಧ್ಯಾಪಕ ಬಿನೊಯ್ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳ ವಿವಿಧ ಪ್ರತಿಭೆಗಳನ್ನು ಗುರುತಿಸಲು ಇರುವ ವೇದಿಕೆಯಾಗಿದೆ. ಶಾಲಾ ಕ್ಲಬ್ ಗಳ ಚಟುವಟಿಕೆಯಲ್ಲಿ ಸಕ್ರಿಯ ಭಾಗವಹಿಸಿ ದೊಡ್ಡ ವಿಜ್ಞಾನಿಯಾಗಿ ಎಂದು ಹಾರೈಸಿದರು.
ಉಪಮುಖ್ಯಪಾಧ್ಯಾಯನಿ ಶಾಯಿದ ಬೀವಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಿಂದ ವಿಜ್ಞಾನ ಪ್ರಯೋಗ ಮತ್ತು ಸಮಾಜ ವಿಜ್ಞಾನ ಗಣಿತದ ವಿವಿಧ ಚಟುವಟಿಕೆಗಳು ನಡೆಯಿತು. ವಿವಿಧ ಕ್ಲಬ್ ಗಳ ಸಂಚಾಲಕರಾದ ವಿದ್ಯಾ ಸಿ.ಎಚ್, ನಿರಂಜನ್ ರೈ ಪೆರಡಾಲ, ಕೃಷ್ಣಕುಮಾರ್, ತಂಗಮಣಿ ಟೀಚರ್, ಶರಣ್ಯ ಟೀಚರ್ ಉಪಸ್ಥಿತರಿದ್ದರು. ಶಿಕ್ಷಕಿ ಪ್ರಭಾವತಿ ಟೀಚರ್ ಸ್ವಾಗತಿಸಿ, ಜ್ಯೋತ್ಸ್ನಾ ಟೀಚರ್ ವಂದಿಸಿದರು. ರಾಜೇಶ್ ಮಾಸ್ತರ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳ ಪ್ರಾರ್ಥನೆ ಹಾಡಿದರು.




.jpg)
.jpg)
