ಧಾರವಾಡದ ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ಹೊಡೆಕ್ ವೈಬ್ರೇಶನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ನಿರ್ಮಿಸಿದ 3ನೇ ಗ್ರೀನ್‌ಫೀಲ್ಡ್ ಘಟಕದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಇಂದು ಉತ್ಪದನಾ ವಲಯದಲ್ಲಿ ಅಭೂತಪೂರ್ವ ಬೆಳವಣಿಗೆ ಸಾಧಿಸುತ್ತಿದೆ ಎಂದು ಹೇಳಿದರು.
ಭಾರತದ ಇಂದು ಕೈಗಾರಿಕೆ, ಔದ್ಯೋಗಿಕ, ಶಿಕ್ಷಣ, ಮಾಹಿತಿ ತಂತ್ರಜ್ಞಾನ, ಸಾರಿಗೆ, ವಿದ್ಯುತ್ ಹೀಗೆ ಪ್ರತಿಯೊಂದರಲ್ಲೂ ಆತ್ಮನಿರ್ಭರವಾಗಿದೆ. 2014ರಲ್ಲಿ ಇದ್ದಂತಹ ಆಮದು ಪರಿಸ್ಥಿತಿ ಇಂದಿಲ್ಲ. ಜಗತ್ತಿನಲ್ಲೇ ಅತಿದೊಡ್ಡ ರಫ್ತು ರಾಷ್ಟ್ರವಾಗಿ ಅಭಿವೃದ್ಧಿ ಸಾಧಿಸುತ್ತಿದೆ ಎಂದು ಪ್ರತಿಪಾದಿಸಿದರು.
ಜಗತ್ತಿನಲ್ಲಿ ಈವರೆಗೆ ಚೀನಾ, ವಿಯೇಟ್ನಾಂ ಮಾತ್ರ ಉತ್ಪಾದಕ ರಾಷ್ಟ್ರಗಳಾಗಿ ಮುಂಚೂಣಿಯಲ್ಲಿದ್ದವು. ಈಗ ಆ ಸಾಲಿಗೆ ಭಾರತ ಸಹ ಸೇರ್ಪಡೆಯಾಗಿದ್ದು, ಉತ್ಪಾದನೆಯಲ್ಲಿ 3ನೇ ಅತಿದೊಡ್ಡ ರಾಷ್ಟ್ರವಾಗಿ ಹೊರ ಹೊಮ್ಮಲಿದೆ. ಆದರೆ, ಭವಿಷ್ಯದಲ್ಲಿ ನಂಬರ್ ಒನ್ ದೇಶವಾಗಬೇಕು ಎಂಬುದು ಪ್ರಧಾನಿ ಮೋದಿ ಅವರ ಧ್ಯೇಯವಾಗಿದ್ದು, ಆ ನಿಟ್ಟಿನಲ್ಲಿ ನವ ಭಾರತ ಹೆಜ್ಜೆ ಹಾಕಿದೆ ಎಂದು ಜೋಶಿ ಹೇಳಿದರು.




