ಕೊಚ್ಚಿ: ಶಾಲಾ ಮಕ್ಕಳ ಸುರಕ್ಷತೆಗಾಗಿ ಏಳು ಮಾರ್ಗಸೂಚಿಗಳನ್ನು ಜಾರಿಗೊಳಿಸಿರುವುದಾಗಿ ಸರ್ಕಾರ ಹೈಕೋಟಿಗೆ ತಿಳಿಸಿದೆ. ವಯನಾಡ್ ಸುಲ್ತಾನ್‍ಬತ್ತೇರಿಯಲ್ಲಿ ಶಾಲಾ ವಿದ್ಯಾರ್ಥಿನಿ ತರಗತಿಯಲ್ಲಿ ವಿಷಪೂರಿತ ಹಾವು ಕಡಿದು ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿ ವಕೀಲ ಕುಳತ್ತೂರ್ ಜಯ್‍ಸಿಂಗ್ ಹೈಕೋರ್ಟಿಗೆ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ ಈ ಮಾಹಿತಿ ನೀಡಿದೆ.
ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಹೆಚ್ಚುವರಿ ನಿರ್ದೇಶಕರು ಹೊರಡಿಸಿರುವ ಅಧಿಸೂಚನೆ ಪ್ರತಿಯನ್ನು ಹೈಕೋರ್ಟಿಗೆ ಸಲ್ಲಿಸಲಾಗಿದೆ.
ಶಾಲಾ ಶೌಚಗೃಹಗಳಲ್ಲಿ ನೀರು, ಬೆಳಕು, ಶುಚಿತ್ವ ಖಚಿತಪಡಿಸಬೇಕು, ಶಾಲೆಗಳು ಪ್ರಥಮ ಚಿಕಿತ್ಸಾ ಕಿಟ್ ಹೊಂದಿದ್ದು, ಕನಿಷ್ಠ ಇಬ್ಬರು ಶಿಕ್ಷಕರು ಪ್ರಥಮ ಚಿಕಿತ್ಸೆ ಬಗ್ಗೆ ತರಬೇತಿ ಹೊಂದಿರಬೇಕು, ತುರ್ತು ಚಿಕಿತ್ಸಾ ಸನ್ನಿವೇಶ ಎದುರಿಸಲು ಚೈಲ್ಡ್ ಎಮರ್ಜೆನ್ಸಿ ಮೆಡಿಕಲ್ ರೆಸ್ಪಾನ್ಸ್ ಯೋಜನೆ ತಯಾರಿಸಬೇಕು ಹಾಗೂ ಪೀಡಿಯಟ್ರಿಕ್ ಮೆಡಿಕಲ್ ಕೇರ್ ಮುಂತಾದವುಗಳು ಲಭ್ಯವಾಗುವ ರೀತಿಯಲ್ಲಿ ಸನಿಹದ ಅಸ್ಪತ್ರೆಯೊಂದಿಗೆ ಸಂಯೋಜಿಸಿರಬೇಕು, ವಿಷಪೂರಿತ ಹಾವುಗಳನ್ನು ದೂರೀಕರಿಸಲು ಅರಣ್ಯ ಇಲಾಖೆಯೊಂದಿಗೆ ಸಹಕರಿಸಿ ಶಾಲೆ ಹಾಗೂ ವಠಾರ ಶುಚೀಕರಿಸಬೇಕು, ಬೆಂಕಿ, ಪ್ರವಾಹ ಮುಂತಾದವುಗಳನ್ನು ತಡೆಗಟ್ಟಲು ವಿಪತ್ತು ನಿವಾರಣಾ ಪ್ರಾಧಿಕಾರ ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳೊಂದಿಗೆ ಕೈಜೋಡಿಸಿ ಮೋಕ್‍ಡ್ರಿಲ್(ಕಲ್ಪಿತ ಕಾರ್ಯಾಚರಣೆ)ನಡೆಸಬೆಕು, ಈ ಎಲ್ಲಾ ನಿರ್ದೇಶಗಳ ಬಗ್ಗೆ ಮೇಲ್ನೋಟ ವಹಿಸುವುದಾಗಿ ಶಾಲಾ ಅಧಿಕಾರಿಗಳು, ಆಡಳಿತ ವರ್ಗ ಖಚಿತಪಡಿಸಬೇಕು ಹಾಗೂ ಈ ಬಗ್ಗೆ ಜಿಲ್ಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ತಪಾಸಣೆ ನಡೆಸುವಂತೆಯೂ ಸೂಚಿಸಲಾಗಿದೆ.


.jpeg)

