ಮುಳ್ಳೇರಿಯ: ಬೆಳ್ಳೂರು ಕೃಷಿ ಭವನದ ಅಧೀನದಲ್ಲಿ ನೋಂದಾಯಿತವಾಗಿರುವ ನೆಟ್ಟಣಿಗೆ ರೈತ ಮಿತ್ರ ಕೃಷಿ ತಂಡದ ಕಾರ್ಯಾರಂಭದ ಅಂಗವಾಗಿ 'ನೇಜಿ ಹಬ್ಬ' ವನ್ನು ಜೂ.27 ರಂದು(ಇಂದು) ಬೆಳಿಗ್ಗೆ 09:30 ರಿಂದ ವೆಂಕಪ್ಪ ಮಣಿ ಭಟ್ ಅವರ ಕೃಷಿಭೂಮಿಯಲ್ಲಿ ಆಯೋಜಿಸಲಾಗಿದೆ.
ಬೆಳಿಗ್ಗೆ 10:30ಕ್ಕೆ ಬೆಳ್ಳೂರು ಕೃಷಿ ಭವನದಲ್ಲಿ ಕೃಷಿಕ ಸಭೆ ಹಾಗೂ 2025-26ನೇ ಸಾಲಿನ ಜನಪರ ಯೋಜನೆಯಡಿ ಭತ್ತದ ಕೃಷಿಕರಿಗೆ ಬಿತ್ತನೆ ಬೀಜದ ವಿತರಣೆ ಏರ್ಪಡಿಸಲಾಗಿದೆ. ಎಲ್ಲಾ ಕೃಷಿಕ ಬಂಧುಗಳು ಆಗಮಿಸಿ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬೇಕಾಗಿ ವಿನಂತಿಸಲಾಗಿದೆ. ಬಿತ್ತನೆ ಬೀಜ ಪಡೆಯುವ ರೈತರು ತಮ್ಮ ಕೃಷಿಭೂಮಿಯ ತೆರಿಗೆ ರಶೀೀದಿ ತರಬೇಕಾಗಿದೆ ತಿಳಿಸಲಾಗಿದೆ.




