ಕಾಸರಗೋಡು: ಪ್ರಾಕೃತಿಕ ವಿಕೋಪ ಸಂತ್ರಸ್ತರಿಗಾಗಿ ತೆರಯಲಾಗಿದ್ದ ಶಿಬಿರಕ್ಕೆ ನುಗ್ಗಿ ಅಧಿಕಾರಿಗಳಿಗೆ ಬೆದರಿಕೆಯೊಡ್ಡಿದ ಮಾಲೋಂಪರಂಬ ನಿವಾಸಿ ಶ್ಯಾಮ ಕುಮಾರ್ ಎಂಬಾತನನ್ನು ಚಿತ್ತಾರಿಕ್ಕಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಾಲೋಂಪರಂಬದ ಸಂತ್ರಸ್ತರ ಶಿಬಿರಕ್ಕೆ ನುಗ್ಗಿದ ಆರೋಪಿ, ಅಲ್ಲಿದ್ದ ವೆಸ್ಟ್ ಎಳೇರಿ ಗ್ರಾಮಾಧಿಕಾರಿ ಸೇರಿದಂತೆ ಅಧಿಕಾರಿಗಳಿಗೆ ಕೊಲೆ ಬೆದರಿಕೆಯೊಡ್ಡಿರುವ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.

