HEALTH TIPS

ಇಸ್ರೇಲ್ ದಾಳಿಗೆ ಇರಾನ್ ಪ್ರತಿರೋಧ: ಟೆಲ್ ಅವಿವ್, ಜೆರುಸಲೆಮ್ ಮೇಲೆ ಕ್ಷಿಪಣಿ ದಾಳಿ

ಟೆಲ್ ಅವಿವ್‌: ಇಸ್ರೇಲ್ ಮತ್ತು ಇರಾನ್‌ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಉಭಯ ರಾಷ್ಟ್ರಗಳು ಶನಿವಾರ ಹಲವು ಕ್ಷಿಪಣಿಗಳನ್ನು ಪರಸ್ಪರ ಹಾರಿಸಿವೆ. 

ಪರಮಾಣು ಬಾಂಬ್ ತಯಾರಿಸುವ ಯತ್ನವನ್ನು ವಿಫಲಗೊಳಿಸುವ ಭಾಗವಾಗಿ ಇರಾನ್‌ ಮೇಲೆ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಹೇಳಿಕೊಂಡಿದೆ.

ಇಸ್ರೇಲ್‌ನ ದಾಳಿಗೆ ಇರಾನ್‌ ಪ್ರತಿದಾಳಿ ನಡೆಸಿದೆ. ಇದನ್ನು ಇಸ್ರೇಲ್‌ನ ಕ್ಷಿಪಣಿ ನಿರೋಧಕ ಸಾಧನಗಳು ನಿಷ್ಕ್ರಿಯೆಗೊಳಿಸುವ ಯತ್ನ ನಡೆಸಿದವು ಎಂದು ವರದಿಯಾಗಿದೆ.

ಟೆಲ್‌ ಅವಿವ್‌ ಮತ್ತು ಜೆರುಸಲೆಮ್‌ನಲ್ಲಿ ಸೈರನ್‌ಗಳು ಮೊಳಗಿದವು. ಸಾರ್ವಜನಿಕರನ್ನು ತಕ್ಷಣವೇ ಸುರಕ್ಷತಾ ಸ್ಥಳಕ್ಕೆ ಕರೆದೊಯ್ಯಲಾಯಿತು. ಇರಾನ್ ದಾಳಿಯಲ್ಲಿ ಒಬ್ಬ ಮಹಿಳೆ ಸೇರಿ ಇಬ್ಬರು ಇಸ್ರೇಲ್‌ನಲ್ಲಿ ಮೃತಪಟ್ಟಿದ್ದಾರೆ. ಹತ್ತಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಇರಾನ್‌ನ ಕ್ಷಿಪಣಿಗಳು ಇಸ್ರೇಲ್‌ನ ಹಲವು ವಸತಿ ಪ್ರದೇಶಗಳಿಗೆ ಅಪ್ಪಳಿಸಿವೆ ಎಂದು ಇಸ್ರೇಲ್‌ನ ಆಂಬುಲೆನ್ಸ್‌ ಚಾಲಕ ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಇಸ್ರೇಲ್‌ ರಕ್ಷಣಾ ಸಚಿವ ಇಸ್ರೇಲ್‌ ಕಟ್ಜ್‌, 'ನಾಗರಿಕರನ್ನು ಗುರಿಯಾಗಿಸಿ ದಾಳಿ ನಡೆಸುವ ಮೂಲಕ ಇರಾನ್‌ ಅಪಾಯದ ಗೆರೆಯನ್ನು ದಾಟಿದೆ. ಇದಕ್ಕಾಗಿ ಆ ದೇಶ ದುಬಾರಿ ಬೆಲೆ ತೆರಬೇಕಾಗುತ್ತದೆ' ಎಂದು ಎಚ್ಚರಿಸಿದ್ದಾರೆ.

'ಯೆಮೆನ್‌ನಲ್ಲಿರುವ ಇರಾನ್‌ ಬೆಂಬಲಿತ ಹೌತಿ ಭಯೋತ್ಪಾದಕ ಸಂಘಟನೆ ಸಿಡಿಸಿದ ಕ್ಷಿಪಣಿಯು ಪಶ್ಚಿಮ ತೀರದಲ್ಲಿರುವ ಇಸ್ರೇಲ್‌ ಆಕ್ರಮಿತ ಪ್ಯಾಲೆಸ್ಟೀನ್‌ನಲ್ಲಿ ಮೂವರು ಮಕ್ಕಳ ಸಹಿತ ಐವರು ಮೃತಪಟ್ಟಿದ್ದಾರೆ ಎಂದು ಅಲ್ಲಿನ ರೆಡ್‌ ಕ್ರೆಸೆಂಟ್ ಹೇಳಿದೆ.

ಇರಾನ್‌ ರಾಜಧಾನಿ ಟೆಹರಾನ್‌ನಲ್ಲಿ ಶುಕ್ರವಾರ ರಾತ್ರಿ ಹಲವೆಡೆ ಸ್ಫೋಟದ ಸದ್ದು ಕೇಳಿಸಿದೆ. ಎರಡು ಕ್ಷಿಪಣಿಗಳು ಮೆಹ್ರಾಬಾದ್‌ ವಿಮಾನ ನಿಲ್ದಾಣಕ್ಕೆ ಅಪ್ಪಳಿಸಿವೆ ಎಂದು ಸ್ಥಳೀಯ ಫಾರ್ಸ್‌ ನ್ಯೂಸ್‌ ವರದಿ ಮಾಡಿದೆ.

ಇಸ್ರೇಲ್‌ನ ವೈಮಾನಿಕ ದಾಳಿಯಲ್ಲಿ ಹಿರಿಯ ಸೇನಾಧಿಕಾರಿಗಳನ್ನೂ ಒಳಗೊಂಡು 78 ಜನರು ಮೃತಪಟ್ಟಿದ್ದಾರೆ. 320 ಜನ ಗಾಯಗೊಂಡಿದ್ದಾರೆ. ಇವರೆಲ್ಲರೂ ನಾಗರಿಕರು. ಇರಾನ್ ದಾಳಿಯನ್ನು ಹಿಮ್ಮೆಟ್ಟಿಸಲು ಇಸ್ರೇಲ್‌ ಪಡೆಗೆ ನೆರವಾಗಲು ಅಮೆರಿಕದ ರಕ್ಷಣಾ ಸಾಧನಗಳು ಶುಕ್ರವಾರ ಯುದ್ಧಭೂಮಿಗೆ ತಲುಪಿವೆ. ಇರಾನ್‌ ಸುಮಾರು 100 ಕ್ಷಿಪಣಿಗಳನ್ನು ಸಿಡಿಸಿದ್ದು, ಅವುಗಳಲ್ಲಿ ಬಹುತೇಕವನ್ನು ಹೊಡೆದುರುಳಿಸಲಾಗಿದೆ ಎಂದು ಇಸ್ರೇಲ್‌ನ ಸೇನಾಧಿಕಾರಿಗಳು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries