ಹೀಗಾಗಿ ಮೂರನೇ ಯುದ್ಧವಾಗುವ ಎಲ್ಲಾ ಅಪಾಯಗಳೂ ಇವೆ. ಹೀಗಾಗಿ, ವಿಶ್ವದಾದ್ಯಂತ ಕಚ್ಚಾ ತೈಲದ ಬೆಲೆ ಹೆಚ್ಚಳವಾಗಲಿದೆ.
ಈಗಾಗಲೇ ಬ್ಯಾರೆಲ್ ಕಚ್ಚಾ ತೈಲದ ಬೆಲೆಯು ಸಾಕಷ್ಟು ಹೆಚ್ಚಿಗೆ ಆಗಿದೆ. ಇಸ್ರೇಲ್ ಮತ್ತು ಇರಾನ್ ಯುದ್ಧ ಪ್ರಾರಂಭವಾದಾಗಲೇ ವಿಶ್ವದಾದ್ಯಂತ ಬೆಲೆ ಏರಿಕೆಯ ಬಿಸಿ ಮುಟ್ಟಿದೆ. ಇದರೊಂದಿಗೆ ಚಿನ್ನದ ಬೆಲೆಯೂ ಹೂಡಿಕೆದಾರರಿಂದ ಹೆಚ್ಚಾಗುತ್ತಿದೆ.
ಭಾರತದಲ್ಲೂ ಚಿನ್ನ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಭಾರತವು ಶೇ 70% ಪ್ರತಿಶತಕ್ಕಿಂತ ಹೆಚ್ಚು ಕಚ್ಚಾ ತೈಲವನ್ನು ಮಧ್ಯಪ್ರಾಚ್ಯದಿಂದಲೇ ಆಮದು ಮಾಡಿಕೊಳ್ಳುತ್ತಿದೆ. ಈ ರೀತಿ ಇರುವಾಗ ಕಳೆದ 15 ದಿನಗಳಿಂದ ಈ ಭಾಗದಲ್ಲಿ ಸಂಘರ್ಷ ಹೆಚ್ಚಾಗಿದ್ದು. ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ ಹಲವು ಪಟ್ಟು ಹೆಚ್ಚಳವಾಗಿದೆ.
ಇದರೊಂದಿಗೆ ವಿಶ್ವದಲ್ಲಿ ಅಶಾಂತಿ ಹಾಗೂ ಯುದ್ಧ ಪರಿಸ್ಥಿತಿ ಹಿನ್ನೆಲೆಯಲ್ಲಿ ಹೂಡಿಕೆದಾರರು ಚಿನ್ನದ ಮೇಲೆ ಹೂಡಿಕೆ ಮಾಡುವುದು ಹೆಚ್ಚಳವಾಗಿದೆ. ಹೀಗಾಗಿ, ಚಿನ್ನದ ಬೆಲೆಯೂ ಹೆಚ್ಚಾಗುತ್ತಿದೆ. ಇದರೊಂದಿಗೆ ಬೆಳ್ಳಿ ಹಾಗೂ ಸ್ಟೀಲ್ ಸೇರಿದಂತೆ ವಿವಿಧ ವಸ್ತುಗಳ ಬೆಲೆಯು ಸಹಜವಾಗಿಯೇ ಹೆಚ್ಚಳವಾಗುವ ಸಾಧ್ಯತೆ ಇದೆ.
ಇಲ್ಲಿಯ ವರೆಗೆ ಈ ಯುದ್ಧವು ಇಸ್ರೇಲ್ ಹಾಗೂ ಇರಾನ್‌ಗೆ ಸೀಮಿತವಾಗಿತ್ತು. ಎರಡೂ ರಾಷ್ಟ್ರಗಳು ಶತಮಾನಗಳಿಂದ ಸಂಘರ್ಷದಲ್ಲಿವೆ. ಆದರೆ ಸೂಪರ್ ಪವರ್ ನೇಷನ್ ಎಂದು ಹೇಳುವ ಅಮೆರಿಕ ಇಂದು ಇರಾನ್‌ನ ಮೂರು ಭಾಗದಲ್ಲಿ ಭಾರೀ ದಾಳಿ ಮಾಡಿದೆ. ಅಲ್ಲದೇ ಇನ್ಮುಂದಿನ ಮೂರು ವರ್ಷಗಳಿಗಾದರೂ ಇರಾನ್ ನ್ಯೂಕ್ಲಿಯರ್ ಬಾಂಬ್ ಉತ್ಪಾದನೆ ಮಾಡಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ಅಮೆರಿಕ ಹೇಳಿದೆ. ಆದರೆ, ನ್ಯೂಕ್ಲಿಯರ್ ಬಾಂಬ್ ಇರುವ ಕೆಲವು ಪ್ರಮುಖ ರಾಷ್ಟ್ರಗಳು ಇರಾನ್‌ನ ಬೆಂಬಲಕ್ಕೆ ಬರುತ್ತಿವೆ. ಮೊದಲಿಗೆ ಪಾಕಿಸ್ತಾನ ಹಾಗೂ ರಷ್ಯಾ ದೇಶಗಳು ಬಾಹ್ಯ ಬೆಂಬಲವನ್ನು ಇರಾನ್‌ಗೆ ಸೂಚಿಸಿದೆ.
ಅಮೆರಿಕ ದೇಶವು ಇರಾನ್‌ನ ಮೂರು ನ್ಯೂಕ್ಲಿಯರ್ ಘಟಕಗಳನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡಿದೆ. ಇದರಿಂದ ಮುಂದಿನ ದಿನಗಳಲ್ಲಿ ಸಂಘರ್ಷ ಹೆಚ್ಚಾಗುವ ಸಾಧ್ಯತೆ ಇದೆ. ಇದರ ನೇರ ಪರಿಣಾಮ ಹಲವು ದೇಶಗಳ ಮೇಲೆ ಆಗಲಿದೆ. ಅದರಲ್ಲಿ ಭಾರತವೂ ಸೇರಿದೆ ಎನ್ನಲಾಗುತ್ತಿದೆ. ಈಗಾಗಲೇ ವಾರಾಂತ್ಯದಲ್ಲಿ ಚಿನ್ನದ ಬೆಲೆಯು ಪ್ರತಿ 10 ಗ್ರಾಂನ ಬೆಲೆಯು ಒಂದು ಲಕ್ಷವನ್ನು ದಾಟಿದೆ. ಬೆಳ್ಳಿ ಬೆಲೆಯೂ ಏರಿಕೆಯ ಹಾದಿಯಲ್ಲಿದೆ. ಹೀಗಾಗಿ ಪೆಟ್ರೋಲ್, ಡೀಸೆಲ್ ಮತ್ತು ಚಿನ್ನ & ಬೆಳ್ಳಿ ಬೆಲೆ ಭಾರೀ ಹೆಚ್ಚಳವಾಗಲಿದೆ ಎಂದು ಹೇಳಲಾಗುತ್ತಿದೆ.




