ಚೀನದಿಂದ ಪಾಕಿಸ್ಥಾನಕ್ಕೆ ಈ ಹಡಗು ಹೊರಟಿತ್ತು. ಈ ಬಗ್ಗೆ ಪಾಕಿಸ್ಥಾನ ಸುಳ್ಳು ಹೇಳಿದ್ದರೂ ಬಳಿಕ ಕ್ಷಿಪಣಿ ತಯಾರಿಕೆಗೆ ಬಳಸಬಹುದಾದ ಸಾಧನಗಳನ್ನು ಪಾಕಿಸ್ಥಾನ ಆಮದು ಮಾಡಿಕೊಳ್ಳುತ್ತಿತ್ತು ಎಂದು ತಿಳಿದುಬಂದಿತ್ತು. ಉಗ್ರವಾದ ಪೋಷಿಸಲು ಧನ ಸಹಾಯ ನೀಡಿದ ಆರೋಪದಲ್ಲಿ ಎಫ್‌ಎಟಿಎಫ್ನಿಂದಲೇ ಈ ಹಿಂದೆ ಬೂದು ಪಟ್ಟಿಗೆ ಪಾಕಿಸ್ಥಾನವು ಸೇರ್ಪಡೆಯಾಗಿತ್ತು.
ಪ್ರಸ್ತುತ ಪಹಲ್ಗಾಮ್ ಉಗ್ರ ದಾಳಿಯಲ್ಲಿ ಪಾಕಿಸ್ಥಾನದ ಪಾತ್ರದ ಬಗ್ಗೆ ಎಫ್‌ಎಟಿಎಫ್ನಿಂದ ತನಿಖೆ ನಡೆಯುತ್ತಿದೆ. ಹೀಗಾಗಿ ಈ ವರದಿಯ ಆಧಾರದಲ್ಲಿ ಪಾಕಿಸ್ಥಾನವನ್ನು ಬೂದು ಪಟ್ಟಿಗೆ ಮತ್ತೆ ಸೇರ್ಪಡೆಗೊಳಪಡಿಸಿ, ಆರ್ಥಿಕ ನಿರ್ಬಂಧಗಳನ್ನು ಹೇರುವಂತೆ ಆರ್ಥಿಕ ಕಾರ್ಯಪಡೆಗೆ ಭಾರತ ಒತ್ತಾಯಿಸಬಹುದು ಎಂದು ಮೂಲಗಳು ತಿಳಿಸಿವೆ.




