ಬಲಿಯಾ: ಧಾರ್ಮಿಕ ಯಾತ್ರೆಗೆಂದು ಇರಾನ್‌ಗೆ ತೆರಳಿದ್ದ ಉತ್ತರಪ್ರದೇಶದ ಕುಟುಂಬವೊಂದು ಇದೀಗ ಸಂಘರ್ಷ ಪೀಡಿತ ಟೆಹರಾನ್‌ನಲ್ಲಿ ಸಿಲುಕಿದ್ದು, ಸುರಕ್ಷಿತವಾಗಿ ವಾಪಸಾಗಲು ಕೇಂದ್ರ ಸರ್ಕಾರದ ಸಹಾಯ ಕೋರಿದೆ.
ಯಾತ್ರಾರ್ಥಿಗಳನ್ನು ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯ ರಾಸ್ರಾ ನಗರದ ನಿವಾಸಿಗಳಾದ ಸಯ್ಯದ್ ಅಸದ್ ಅಲಿ ಬಕರ್, ಮೊಹಮ್ಮಮದ್ ಮುಸ್ತಾಬಾ ಹುಸ್ಸೈನ್, ಸಯ್ಯದ್ ಮೊಹಮ್ಮದ್, ಶಾಮಾ ಜಹಾನ್, ಸಯ್ಯದ್ ನಜ್ಮುಶ್ಕಿಬ್ ಎಂದು ಗುರುತಿಸಲಾಗಿದೆ.
ರಾಸ್ರಾದ ನಿವಾಸಿ ಆತಿಫ್ ಈ ಬಗ್ಗೆ ಮಾಹಿತಿ ನೀಡಿದ್ದು, ' ನನ್ನ ಕುಟುಂಬದ ಸದಸ್ಯರು ಧಾರ್ಮಿಕ ಯಾತ್ರೆಗೆಂದು ಇರಾಕ್‌ಗೆ ತೆರಳಿದ್ದರು. ಅಲ್ಲಿಂದ ಮೇ 25ರಂದು ಇರಾನ್‌ಗೆ ತೆರಳಿದ್ದಾರೆ. ಪ್ರಸಕ್ತ ಟೆಹರಾನ್‌ನ ಹೋಟೆಲ್ ಒಂದರಲ್ಲಿ ಸುರಕ್ಷಿತವಾಗಿದ್ದಾರೆ. ಆದರೆ, ಯುದ್ಧದ ಪರಿಸ್ಥಿತಿ ಇರುವ ಕಾರಣ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಸರ್ಕಾರ ಮಧ್ಯಸ್ಥಿಕೆ ವಹಿಸಬೇಕು' ಎಂದು ಮನವಿ ಮಾಡಿದ್ದಾರೆ.
ಬಲಿಯಾ ಸಂಸದ ಸನಾತನ್ ಪಾಂಡೆ ಕೂಡ ಈ ಸಂಬಂಧಿಸಿದಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬರೆದು ಮನವಿ ಮಾಡಿದ್ದಾರೆ.




