ಬೀಜಿಂಗ್: ಚೀನಾದ ತಿಯಾನ್‌ಜಿನ್ ನಗರದಲ್ಲಿ ಜುಲೈ 15ರಂದು ನಡೆಯುವ ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲು ವಿದೇಶಾಂಗ ಸಚಿವ ಎಸ್.ಜೈಶಂಕರ್ ಮುಂದಿನ ವಾರ ಚೀನಾಕ್ಕೆ ಭೇಟಿ ನೀಡಲಿಲಿದ್ದಾರೆ.
ವಿದೇಶಾಂಗ ಸಚಿವ ವಾಂಗ್ ಯಿ ಅವರೊಂದಿಗೆ ಜೈಶಂಕರ್ ಅವರು ಜುಲೈ 13ರಂದು ಮಾತುಕತೆ ನಡೆಸುವರು ಎಂದು ಚೀನಾ ವಿದೇಶಾಂಗ ಸಚಿವಾಲಯ ತಿಳಿಸಿದೆ.
ವಿರಳ ಲೋಹಗಳ ರಫ್ತಿನ ಮೇಲೆ ಹೇರಿರುವ ನಿರ್ಬಂಧ ಸೇರಿ ಅನೇಕ ವಿಚಾರಗಳ ಕುರಿತು ಉಭಯ ನಾಯಕರು ಚರ್ಚಿಸುವ ಸಾಧ್ಯತೆ ಇದೆ.
ಗಡಿ ವಿಚಾರವಾಗಿ 2020ರಲ್ಲಿ ಪೂರ್ವ ಲಡಾಖ್‌ನ ವಾಸ್ತವ ನಿಯಂತ್ರಣ ರೇಖೆಯ(ಎಲ್‌ಎಸಿ) ವಿವಿಧ ಸ್ಥಳಗಳಲ್ಲಿ ಭಾರತ ಮತ್ತು ಚೀನಾ ಯೋಧರ ನಡುವೆ ಸಂಘರ್ಷ ಉಂಟಾಗಿ, ಉಭಯ ದೇಶಗಳ ನಡುವಿನ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಈ ಸಂಘರ್ಷದ ಬಳಿಕ, ಇದೇ ಮೊದಲ ಬಾರಿಗೆ ಜೈಶಂಕರ್ ಅವರು ಚೀನಾಕ್ಕೆ ಭೇಟಿ ನೀಡುತ್ತಿದ್ದಾರೆ.




