HEALTH TIPS

ಪೊಸಡಿಗುಂಪೆ ಶ್ರೀ ಶಂಕರ ಧ್ಯಾನ ಮಂದಿರ ಪರಿಸರದಲ್ಲಿ ವನ ಜೀವನ ಯಜ್ಞ-2025- ಭವಿಷ್ಯದ ಹಸಿರಿಗಾಗಿ ಗಿಡ ನೆಡುವ ಕಾರ್ಯಕ್ರಮ

ಕುಂಬಳೆ: ಧರ್ಮತ್ತಡ್ಕ ಸಮೀಪದ ಪೊಸಡಿಗುಂಪೆ ಶ್ರೀ ಶಂಕರ ಧ್ಯಾನ ಮಂದಿರ ಮತ್ತು ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್, ಮಂಗಳೂರು ಇದರ 

ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಮೆಷಿನ್ ಲರ್ನಿಂಗ್ ವಿಭಾಗದ ಜಂಟಿ ಆಶ್ರಯದಲ್ಲಿ ವನ ಜೀವನ ಯಜ್ಞ-2025-ಭವಿಷ್ಯದ ಹಸಿರಿಗಾಗಿ ಗಿಡ ನೆಡುವ ಕಾರ್ಯಕ್ರಮ ಶನಿವಾರ ಆಯೋಜಿಸಲಾಯಿತು. 

ಪೊಸಡಿಗುಂಪೆ ಶ್ರೀ ಶಂಕರ ಧ್ಯಾನ ಮಂದಿರ  ಪರಿಸರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕಕ್ವೆ ಶಂಕರ್ ರಾವ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಮಂಗಳೂರು ಇಲ್ಲಿನ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಮೆಷಿನ್ ಲರ್ನಿಂಗ್ ವಿಭಾಗದ 32 ವಿದ್ಯಾರ್ಥಿ, ವಿದ್ಯಾರ್ಥಿನಿಯರು  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕೇರಳ ಅರಣ್ಯ ಇಲಾಖೆಯಿಂದ ದೊರೆಕಿದ 100ಕ್ಕೂ ಅಧಿಕ ಕಾಡುತ್ಪತ್ತಿ ಗಿಡಗಳನ್ನು ನೆಡಲಾಯಿತು. ಜೊತೆಗೆ, ಧ್ಯಾನ ಮಂದಿರ ಪರಿಸರದ ಶುಚೀಕರಣದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಪ್ರಾಧ್ಯಾಪಕ ಗಣರಾಜ್ ಕರುವಜೆ ಅವರ ಸಂಯೋಜನೆಯಲ್ಲಿ ಜರಗಿದ ಈ ಕಾರ್ಯಕ್ರಮದಲ್ಲಿ, ಗುಂಪೆ ವಲಯ ಕಾರ್ಯದರ್ಶಿ ಕೇಶವ ಪ್ರಸಾದ ಎಡಕ್ಕಾನ ಹಾಗೂ ಪರಿಸರವಾಸಿಗಳು ಭಾಗವಹಿಸಿ ಸಹಕರಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries