ಮುಳ್ಳೇರಿಯ: ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ಬಗ್ಗೆ ಕೇಂದ್ರ ಸರ್ಕಾರ ತೋರಿಸುತ್ತಿರುವ ತೀವ್ರ ನಿರ್ಲಕ್ಷ್ಯದ ವಿರುದ್ಧ ಜುಲೈ 22 ರಂದು ಕಾಞಂಗಾಡ್ ಅಂಚೆ ಕಚೇರಿಗೆ ನಡೆಸಲಿರುವ ಮೆರವಣಿಗೆಯನ್ನು ಯಶಸ್ವಿಗೊಳಿಸುವಂತೆ ಪಿಕೆಎಸ್ ಕಾರಡ್ಕ ವಲಯ ಸಮಾವೇಶ ವಿನಂತಿಸಿದೆ.
ವಲಯ ಅಧ್ಯಕ್ಷ ಸುರೇಂದ್ರನ್ ಅಧ್ಯಕ್ಷತೆ ವಹಿಸಿದ್ದ ಸಮಾವೇಶವನ್ನು ಸಿಪಿಎಂ ಕಾರಡ್ಕ ಪ್ರದೇಶ ಕಾರ್ಯದರ್ಶಿ ಎಂ. ಮಾಧವನ್ ಉದ್ಘಾಟಿಸಿದರು. ಕರ್ನಾಟಕ ರಾಜೀವ್ ಗಾಂಧಿ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ವಿಜೇತೆ ಡಾ. ಅತುಲ್ಯ ಕುಬಣೂರು, ಎಸ್.ಎಸ್.ಎಲ್.ಸಿ.ಯಲ್ಲಿ ಪೂರ್ಣ ಎ ಪ್ಲಸ್ ಪಡೆದ ಶಿಲ್ಪಾ ವೈ.ಜಿ, ಕಿರಣ್ ರಾಜ್ ಕೆ.ಕೆ, ಧನ್ಯಶ್ರೀ ಎ.ಕೆ, ಶರತ್ ಕುಮಾರ್ ಕೆ, ಮತ್ತು ಎಲ್.ಎಸ್.ಎಸ್. ವಿದ್ಯಾರ್ಥಿವೇತನ ಪಡೆದ ಆಶಿಶ್ ಎಸ್., ವಿಜಯ್ ಅವರನ್ನು ಸನ್ಮಾನಿಸಲಾಯಿತು. ಪಿಕೆಎಸ್ ಜಿಲ್ಲಾ ಕಾರ್ಯದರ್ಶಿ ಬಿ.ಎಂ. ಪ್ರದೀಪ್, ಕೆ. ನಾಸರ್, ರವೀಂದ್ರ ರೈ ಮಾತನಾಡಿದರು.
ಹೊಸ ಪದಾಧಿಕಾರಿಗಳಾಗಿ ಸಿ.ಎಚ್.ಐತಪ್ಪ ಅಧ್ಯಕ್ಷರಾಗಿ, ಚಂದ್ರನ್ ಪಣಿಕ್ಕರ್, ವಿನೋದ್ ಪೂವಾಲ (ಉಪಾಧ್ಯಕ್ಷರು), ಎ.ಕೆ. ಶಂಕರ್ ಕಾರ್ಯದರ್ಶಿಯಾಗಿ, ಕೆ. ಸುರೇಂದ್ರನ್, ಎ.ಕೆ. ಕುಶಲನ್ ಜೊತೆ ಕಾರ್ಯದರ್ಶಿಗಳಾಗಿ ಮತ್ತು ರೋಶನ್ ಕುಮಾರ್ ಖಜಾಂಚಿಯಾಗಿ ಆಯ್ಕೆಯಾದರು. ಏರಿಯಾ ಕಾರ್ಯದರ್ಶಿ ಸಿ.ಎಚ್. ಐತಪ್ಪ ಸ್ವಾಗತಿಸಿ, ರೋಶನ್ ವಂದಿಸಿದರು.




