ಬದಿಯಡ್ಕ: ಮುಂಡಿತ್ತಡ್ಕದ ಪಳ್ಳದಲ್ಲಿ ಕಾರ್ಯಾಚರಿಸುತ್ತಿರುವ ಎಣ್ಣೆ ಗಿರಣಿಯೊಂದರ ದಾಸ್ತಾನುಕೊಠಡಿಯಿಂದ 25ಗೋಣಿ ಗೆರಟೆ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬದಿಯಡ್ಕ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೋಯಿಕ್ಕೋಡು ಕಾವಿಲಂಬಾರ ನಿವಾಸಿ ಎ.ಟಿ ಅರುಣ್ ಹಾಗೂ ಚಾತಂಗೋಡು ನಡ ನಿವಾಸಿ ಅಲ್ತಾಫ್ ಬಂಧಿತರು. ಪಚ್ಚಂಬಳ ನಿವಾಸಿ ಸಕರಿಯಾ ಎಂಬವರ ಮಾಲಿಕತ್ವದ ಎಣ್ಣೆ ಗಿರಣಿಯಿಂದ ಈ ಕಳವು ನಡೆದಿದ್ದು, ಕಳವಾದ ಸಾಮಗ್ರಿ ಮೌಲ್ಯ 15ಸಾವಿರ ರೂ. ಅಂದಾಜಿಸಲಾಗಿದೆ.


