HEALTH TIPS

ತೆಂಗಿನಕಾಯಿ ಕಳವು-ಎರಡು ಪ್ರತ್ಯೇಕ ಕೇಸು: ಇಬ್ಬರ ಬಂಧನ

ಬದಿಯಡ್ಕ: ನೆಕ್ರಾಜೆಯ ಕೊಠಡಿಯೊಂದರಲ್ಲಿ ದಾಸ್ತಾನಿರಿಸಿದ್ದ 269ತೆಂಗಿನ ಕಾಯಿ ಕಳವುಗೈದಿರುವ ಬಗ್ಗೆ ನೆಕ್ರಾಜೆ ಪುಂಡೂರು ನಿವಾಸಿ ರಾಮನ್ ಹಾಗೂ ಅರ್ಲಡ್ಕ ನಿವಾಸಿ ರವಿ ಎಂಬವರನ್ನು ಬದಿಯಡ್ಕ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರ್ಲಡ್ಕ ಆಲಂಕೋಲ್ ನಿವಾಸಿ ಕುದಿರತ್ತಾಯರ್  ಎಂಬವರ ಮಾಲಿಕತ್ವದ ಕೊಠಡಿಯಿಂದ ಶುಕ್ರವಾರ ಹಾಡಹಗಲು ಈ ಕಳವು ನಡೆಸಲಾಗಿತ್ತು. 


ಆಂಕೋಲ್ ನಿವಾಸಿ ನಾರಾಯಣನ್ ಎಂಬವರು ಈ ಬಗ್ಗೆ ದೂರು ನೀಡಿದ್ದರು. ಕಾಞಂಗಾಡು ತೀರ್ಥಂಕರ ಎಂಬಲ್ಲಿ ಇತ್ತೀಚೆಗೆ ಕೊಠಡಿಯಲ್ಲಿ ದಾಸ್ತಾನಿರಿಸಿದ್ದ 200ತೆಂಗಿನ ಕಾಯಿ ಕಳವುಗೈದಿರುವ ಬಗ್ಗೆ ಹೊಸದುರ್ಗ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಎನ್. ಪ್ರಶಾಂತ್ ಎಂಬವರ ದೂರಿನ ಮೇರೆಗೆ ಈ ಕೇಸು ದಾಖಲಾಗಿದೆ. ತೆಂಗಿನಕಾಯಿ ಧಾರಣೆ ಗಗನಕ್ಕೇರುತ್ತಿರುವ ಮಧ್ಯೆ ಅಲ್ಲಲ್ಲಿ ತೆಂಗಿನಕಾಯಿ ಕಳವು ಪ್ರಕರಣಗಳೂ ಹೆಚ್ಚುವಂತಾಗಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries