ಮಂಜೇಶ್ವರ: ಮನುಕುಲದ 'ನೋವಿಗೆ ಮದ್ದಾಗಲಿ ಕವಿತೆಗಳು, ಜನಸಾಮಾನ್ಯರ ದನಿಯಾಗಲಿ ಕಾವ್ಯ' ಎಂಬ ಉದ್ಘೋಷದೊಂದಿಗೆ ಬೆಂಗಳೂರಿನ ರಂಗಮಂಡಲ ಹಾಗೂ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳ ಸ್ಮಾರಕ ಗಿಳಿವಿಂಡು ಆಶ್ರಯದಲ್ಲಿ ಜು.27 ರಂದು ಭಾನುವಾರ ಗಿಳಿವಿಂಡು ಆವರಣದಲ್ಲಿ ಕಾವ್ಯ ಸಂಸ್ಕøತಿ ಯಾನ 11ನೇ ಕವಿಗೋಷ್ಠಿ ಬೆಳಿಗ್ಗೆ 10 ರಿಂದ ಸಂಜೆ 5.30ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಬೆಳಿಗ್ಗೆ 10.30 ರಿಂದ 11.30ರ ವರೆಗೆ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಸರ್ವಾಧ್ಯಕ್ಷತೆ ವಹಿಸುವರು. ಕೇರಳದ ಪ್ರಸಿದ್ದ ಕವಯಿತ್ರಿ, ಪ್ರಾಧ್ಯಾಪಕಿ ಡಾ.ಕೆ.ವಿ.ಸಿಂಧು ಉದ್ಘಾಟಿಸುವರು. ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್, ಎಡಿಎಂ ಅಖಿಲ್ ಪಿ., ಉದುಮ ಶಾಸಕ ಕೆ.ವಿ.ಕುಂಞÂ ರಾಮನ್, ಕಸಾಪ ಕೇರಳ ಗಡಿನಾಡ ಘಟಕಾಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜು ಪ್ರಾಂಶುಪಾಲ ಡಾ.ಮೊಹಮ್ಮದಾಲಿ ಪೆರ್ಲ ಮುಖ್ಯ ಅತಿಥಿಗಳಾಗಿರುವರು. ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಸದಸ್ಯ ಡಿ.ಬಿ.ಮಲ್ಲಿಕಾರ್ಜುನ ಮಹಾಮನೆ ಪ್ರಾಸ್ತಾವಿಕವಾಗಿ ಮಾತನಾಡುವರು. ಗಿಳಿವಿಂಡು ಕಾರ್ಯದರ್ಶಿ ಎಂ.ಉಮೇಶ ಸಾಲ್ಯಾನ್, ಕಲಾವಿದೆ ನಿರ್ಮಲಾ ನಾದನ್, ರಾಧಾಕೃಷ್ಣ ಕೆ.ಉಳಿಯತ್ತಡ್ಕ ಉಪಸ್ಥಿತರಿರುವರು.
ಬಳಿಕ ನಡೆಯುವ ಬಹುಭಾಷಾ ಕವಿಗೋಷ್ಠಿಯ ಮೊದಲ ಅಧಿವೇಶನದಲ್ಲಿ ಕೃಷ್ಣನ್ ನಡುವಲತ್ತ್ ಅಧ್ಯಕ್ಷತೆ ವಹಿಸುವರು. ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ ಆಶಯ ನುಡಿಗಳನ್ನಾಡುವರು. ವಿವಿಧ ಕವಿಗಳು ಭಾಗವಹಿಸುವರು. ಅಪರಾಹ್ನ 1.30ರಿಂದ 2.30ರ ವರೆಗೆ ನಡೆಯಲಿರುವ 'ಕನ್ನಡ ಮತ್ತು ಮಲೆಯಾಳದ ನಡುವಿನ ಸೇತುವೆ ಯಾವುದು?' ಸಂವಾದದಲ್ಲಿ ಸವಾಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ, ವೈದ್ಯ, ಸಾಹಿತಿ ಡಾ.ರಮಾನಂದ ಬನಾರಿ, ವಿದ್ವಾಂಸ ಕೆ.ವಿ.ಕುಮಾರನ್ ಭಾಗವಹಿಸುವರು. ಪತ್ರಕರ್ತ ಜಿ.ಎನ್.ಮೋಹನ್ ಸಮನ್ವಯಕಾರಾರಾಗಿರುವರು.
ಬಳಿಕ ನಡೆಯುವ ಎರಡನೇ ಅವಧಿಯ ಬಹುಭಾಷಾ ಕವಿಗೋಷ್ಠಿಯಲ್ಲಿ ಡಾ.ಮೀನಾಕ್ಷಿ ರಾಮಚಂದ್ರ ಅಧ್ಯಕ್ಷತೆ ವಹಿಸುವರು. ವಿಶಾಲಾಕ್ಷ ಪುತ್ರಕಳ ಆಶಯ ನುಡಿಗಳನ್ನಾಡುವರು. ವಿವಿಧ ಕವಿಗಳು ಕವನ ವಾಚನಗೈಯ್ಯುವರು. ಸಂಜೆ 4 ರಿಂದ 4.30ರ ವರೆಗೆ ಭಾವ-ಜಾನಪದ-ಗೀತ ಗಾಯನ ದಿವಾಕರ ಪಿ.ಅಶೋಕನಗರ, ಸಿ.ಎಂ.ನರಸಿಂಹಮೂರ್ತಿ ಚಾಮರಾಜನಗರ ಅವರಿಂದ ನಡೆಯಲಿದೆ. 4.30 ರಿಂದ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಸಮಾರೋಪ ಭಾಷಣ ಮಾಡುವರು. ಸರ್ವಾಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಗೌರವ ಉಪಸ್ಥಿತರಿರುವರು. ಉದುಮ ಶಾಸಕ ವಕೀಲ ಸಿ.ಎಚ್.ಕುಞ್ಞಂಬು, ಮಂಜೇಶ್ವರ ಗ್ರಾ.ಪಂ.ಅಧ್ಯಕ್ಷೆ ಜೀನ್ ಲವೀನ ಮೊಂತೆರೊ, ಕೇರಳ ತುಳು ಅಕಾಡೆಮಿ ಅಧ್ಯಕ್ಷ ಕೆ.ಆರ್.ಜಯಾನಂದ, ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜು ಪ್ರಾಧ್ಯಾಪಕ ಶಿವಶಂಕರ್ ಮುಖ್ಯ ಅತಿಥಿಗಳಾಗಿರುವರು. ಕರ್ನಾಟಕ ಗಡಿಪ್ರದೇಶಾಭಿವೃದ್ಧಿ ಪ್ರಾಧಿಕಾರ್ ಸದಸ್ಯ ಎ.ಆರ್.ಸುಬ್ಬಯ್ಯಕಟ್ಟೆ, ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸಂಕಬೈಲು ಸತೀಶ ಅಡಪ, ಗೋವಿಂದ ಪೈ ಸ್ಮಾರಕ ಸಮಿತಿ ಸದಸ್ಯ ವಾಸುದೇವ, ಮಂಜೇಶ್ವರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಸ್.ರಾಮಚಂದ್ರ, ಯಕ್ಷಗಾನ ಕಲಾವಿದ ನರಸಿಂಹ ಬಲ್ಲಾಳ್ ವಿಶೇಷ ಆಹ್ವಾನಿತರಾಗಿರುವರು. ಕಮಲಾಕ್ಷ ಡಿ, ಸಂತೋಷ್ ಕುಮಾರ್ ಕೆ., ಕಮಲಾಕ್ಷ ಕನಿಲ, ವನಿತಾ ಆರ್.ಶೆಟ್ಟಿ ಸಹಕರಿಸುವರು.








