HEALTH TIPS

ಕೋಝಿಕ್ಕೋಡ್: ಸುನ್ನತಿ: ಅರವಳಿಕೆಯಿಂದ 2 ತಿಂಗಳ ಮಗು ಸಾವು

 ಕೋಝಿಕ್ಕೋಡ್: ಮುಸ್ಲಿಮರ ಧಾರ್ಮಿಕ ಪದ್ಧತಿಯಂತೆ ಸುನ್ನತಿ ಮಾಡುವ ವೇಳೆ 2 ತಿಂಗಳ ಮಗು ಸಾವಿಗೀಡಾಗಿರುವ ಘಟನೆ ಕೇರಳದಲ್ಲಿ ನಡೆದಿದೆ.

'ಕೋಯಿಕ್ಕೋಡ್‌ ಜಿಲ್ಲೆಯ ಕಕ್ಕೂರ್‌ನಲ್ಲಿ ಸುನ್ನತಿ ಮಾಡಲೆಂದು ಅರವಳಿಕೆ ನೀಡಿದ ಬಳಿಕ ಅಸ್ವಸ್ಥಗೊಂಡು ಮಗು ಅಸುನೀಗಿದೆ. ರಾಜ್ಯದ ಮುಸ್ಲಿಂ ಸಮುದಾಯದಲ್ಲಿ ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ಸುನ್ನತಿ ಮಾಡುವುದು ಸಾಮಾನ್ಯವಾಗಿದೆ' ಎಂದು ಕೇರಳ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ವಿ ಮನೋಜ್‌ ಕುಮಾರ್‌ ತಿಳಿಸಿದರು.

'ಮಕ್ಕಳಿಗೆ ನೋವುಂಟುಮಾಡುವ ಧಾರ್ಮಿಕ ಆಚರಣೆಗಳನ್ನು ಕಾನೂನಿನ ಮೂಲಕ ನಿಯಂತ್ರಿಸುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ' ಎಂದರು.

'ಜನನ‌ವಾದ ಎರಡನೇ ವಾರದಲ್ಲಿಯೇ ಮಗುವಿಗೆ ಸುನ್ನತಿ ಮಾಡಿಸಲು ಪೋಷಕರು ಮುಂದಾಗುತ್ತಿದ್ದಾರೆ. ಇದರಿಂದ ಹೆಚ್ಚಿನ ಅಪಾಯವೇನೂ ಇಲ್ಲ' ಎಂದು ತಿರುವಂತಪುರದ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರು ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries