ತಿರುವನಂತಪುರ: ಕೇರಳದ ಪತ್ತನಂತಿಟ್ಟದ ಕ್ವಾರಿಯೊಂದರಲ್ಲಿ ಇಬ್ಬರು ವಲಸೆ ಕಾರ್ಮಿಕರು ಸೋಮವಾರ ಸಿಲುಕಿಕೊಂಡಿದ್ದಾರೆ.
ವಲಸೆ ಕಾರ್ಮಿಕರನ್ನು ಬಿಹಾರ ಮೂಲದ ಅಜಿ ರೈ (38) ಮತ್ತು ಒಡಿಶಾ ಮೂಲದ ಮಹಾದೇವ್ ಎಂದು ಗುರುತಿಸಲಾಗಿದೆ. ಅವರಿಬ್ಬರು ಜೆಸಿಬಿ ನಿರ್ವಾಹಕರಾಗಿದ್ದರು.
ಇಬ್ಬರೂ ಕ್ವಾರಿಯೊಳಗೆ ಹೋಗಿದ್ದ ವೇಳೆ ಕಲ್ಲುಗಳು ಉರುಳಿಬಿದ್ದಿದ್ದರಿಂದ ವಾಪಸ್ ಬರಲು ಸಾಧ್ಯವಾಗುತ್ತಿಲ್ಲ. ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸಿದ್ದಾವೆ. ಆದರೆ ಕಾರ್ಮಿಕರನ್ನು ಪತ್ತೆಹಚ್ಚುವುದು ಕಷ್ಟಸಾಧ್ಯವಾಗಿದೆ.




