ಪೆರ್ಲ: ಕರ್ಹಾಡ ಬ್ರಾಹ್ಮಣ ಅಭ್ಯುದಯ ಸಂಘ ಅಗಲ್ಪಾಡಿ ಇದರ ಕರ್ಹಾಡ ಮಹಿಳಾ ವೇದಿಕೆಯ ನೇತೃತ್ವದಲ್ಲಿ ಕರ್ಹಾಡ ಮಹಿಳಾ ಸಮಾವೇಶ 2025 ಆ. 3 ರಂದು ಭಾನುವಾರ ಪೆರ್ಲ ಶ್ರೀ ಭಾರತೀ ಸದನದಲ್ಲಿ ಜರಗಲಿದೆ. ಬೆಳಗ್ಗೆ 9ಕ್ಕೆ ದೀಪ ಪ್ರಜ್ವಲನೆ, ಲಲಿತಾ ಸಹಸ್ರನಾಮ ಪಠಣ, 9.30ರಿಂದ ಕರ್ಹಾಡ ಅಸ್ಮಿತೆ - ವಿವಿಧ ವಿಚಾರಗಳ ವಿನಿಮಯ ನಡೆಯಲಿದೆ. ಸಂಪನ್ಮೂಲ ವ್ಯಕ್ತಿಗಳಾಗಿ ಸುಧಾ ಎಸ್. ಭಟ್ ಕಶೆಕೋಡಿ, ನಳಿನಿ ಸೈಪಂಗಲ್ಲು ಪಾಲ್ಗೊಳ್ಳಲಿದ್ದಾರೆ.
10.30ರಿಂದ ಮನೋರಂಜನಾ ಆಟಗಳು, 11.15ರಿಂದ ಪ್ರಾತ್ಯಕ್ಷಿಕೆಯಲ್ಲಿ ಪ್ರಸಾಧನ, ಜಡೆ ಹೆಣೆಯುವುದು, ಸೀರೆ ಉಡಿಸುವುದು, ಮದರಂಗಿ ಹಾಕುವುದು, ಹೂ ಮುಡಿಸುವುದು ಇತ್ಯಾದಿ ನಡೆಯಲಿದೆ. ಮಧ್ಯಾಹ್ನ ಭೋಜನ, 1.30ರಿಂದ ಡಾ. ರೋಹಿಣಿ ಭಾರದ್ವಾಜ್ ಬಲೆಕ್ಕಳ ಸುಳ್ಯ ಮಹಿಳಾ ಆರೋಗ್ಯ ಮಾಹಿತಿ ನೀಡಲಿದ್ದಾರೆ. 2.30ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ. ಮಹಿಳಾ ವೇದಿಕೆಯ ಅಧ್ಯಕ್ಷೆ ವಿದ್ಯಾ ಎಡಮಲೆ ಅಧ್ಯಕ್ಷತೆ ವಹಿಸುವರು. ಸಾಹಿತಿ ಹಾಗೂ ಸಂಶೋಧಕಿ ಡಾ. ಪ್ರಪುಲ್ಲ ಜಿ ಭಟ್ ಉಡುಪಿ, ಸುಧಾ ಎಸ್.ವಿ.ಭಟ್ ಮಂಗಳೂರು ಅಭ್ಯಾಗತರಾಗಿ ಪಾಲ್ಗೊ:ಳುವರು. ಕರ್ಹಾಡ ಬ್ರಾಹ್ಮಣ ಅಭ್ಯುದಯ ಸಂಘ ಅಗಲ್ಪಾಡಿ ಅಧ್ಯಕ್ಷ ರಮಾನಂದ ಎಡಮಲೆ, ಕಾರ್ಯದರ್ಶಿ ಗಣೇಶ್ ಚೇರ್ಕೂಡ್ಲು ಉಪಸ್ಥಿತರಿರುವರು. ಸಾಧಕಿಯರಿಗೆ ಗೌರವಾರ್ಪಣೆ, ಲಘು ಉಪಹಾರ, ಮನೋರಂಜನಾ ಆಟಗಳೊಂದಿಗೆ ಕಾರ್ಯಕ್ರಮ ಸಂಪನ್ನವಾಗಲಿದೆ. ಸಮಾಜದ ಎಲ್ಲಾ ವಯೋಮಾನದ ಸ್ತ್ರೀಯರು ಭಾಗವಹಿಸಿ ಸಮಾವೇಶವನ್ನು ಯಶಸ್ವಿಗೊಳಿಸಬೇಕಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.




