ಮಂಜೇಶ್ವರ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಶಾಲೆಯೊಂದರ ವಠಾರದಲ್ಲಿ ಹದಿಮೂರರ ಹರೆಯದ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ 20ರ ಹರೆಯದ ಯುವಕನ ವಿರುದ್ಧ ಪೊಲೀಸರು ಪೋಕ್ಸೋ ಅನ್ವಯ ಕೇಸು ದಾಖಲಿಸಿಕೊಂಡಿದ್ದಾರೆ.
ರಜಾದಿನವಾದ ಭಾನುವಾರ ಬಾಲಕಿಯನ್ನು ಶಾಲಾ ವಠಾರಕ್ಕೆ ಕರೆಸಿಕೊಂಡಿರುವ ಆರೋಪಿ. ಆಕೆಗೆ ಕಿರುಕುಳಕ್ಕೆ ಯತ್ನಿಸುತ್ತಿದ್ದ ಸಂದರ್ಭ ಆಸುಪಾಸಿನವರು ಸಂಶಯದಿಂದ ಶಾಲಾ ವಠಾರಕ್ಕೆ ತೆರಳುತ್ತಿದ್ದಂತೆ ಯುವಕ ಪರಾರಿಯಾಗಿದ್ದಾನೆ. ಬಾಲಕಿಯನ್ನು ವಿಚಾರಿಸಿದಾಗ ಆರೋಪಿ ಈಕೆಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ತಿಳಿಸಿದ್ದಳು. ಈ ಬಗ್ಗೆ ಕೇಸು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಪತ್ತೆಗಾಗಿ ಹುಡುಕಾಟ ಆರಂಭಿಸಿದ್ದಾರೆ.




