ಕಾಸರಗೋಡು: ಸೋಮವಾರ ಮಳೆ ಪ್ರಮಾಣ ತಗ್ಗಿದ್ದು, ಕೇಂದ್ರ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರಜುಲೈ 30ರ ವರೆಗೆ ಆರೆಂಜ್ ಅಲರ್ಟ್ ಜಾರಿಗೊಳಿಸಲಾಗಿದೆ. ಈ ಮಧ್ಯೆ ಜಿಲ್ಲೆಯ ಕರಾವಳಿಯಲ್ಲಿ ಸಮುದ್ರ ಕೊರೆತ ಹೆಚ್ಚಾಗಿದ್ದು, ವಿವಿಧೆಡೆ ಮನೆ, ಆಸ್ತಿ ಸಮುದ್ರಪಾಲಾಗಿದೆ.ಉಪ್ಪಳ ಶಾರದಾನಗರ, ಮಣಿಮುಂಡ, ಹನುಮಾನ್ ನಗರ, ಮೊಗ್ರಾಲ್ ಕಡಪ್ಪುರ, ಕಾಞಂಗಾಡು ಜನ್ಮಾಕಡಪ್ಪುರ, ಬೇಕಲ ಕೋಟಿಕುಳಂ ಪ್ರದೇಶದಲ್ಲಿ ಸಮುದ್ರ ಕೊರೆತದಿಂದ ಹಾನಿಯುಂಟಾಘಿದೆ. ಉಪ್ಪಳ ಹನುಮಾನ್ ಕಡಪ್ಪುರ ಆಸುಪಾಸು 400ಕ್ಕೂ ಹೆಚ್ಚು ಮೀನುಗಾರರ ಕುಟುಂಬಗಳಿದ್ದು, ಇವರಲ್ಲಿ ಬಹುತೇಕ ಮಂದಿ ಸಂಕಷ್ಟ ಅನುಭವಿಸುತ್ತಿದ್ದಾರೆ.
ಸಮುದ್ರ ಕೊರೆತದಿಂದ ಉದುಮ ಪಶ್ಚಿಮ ಜನ್ಮ ಕರವಳಿ ನಿವಾಸಿಗಳು ಆತಂಕದಿಂದ ಕಾಲ ಕಳೆಯುವಂತಾಗಿದೆ. ಜನ್ಮ ಕಡಪ್ಪುರ ಬೀಚ್‍ಗೆ ತೆರಳುವ ರಸ್ತೆಯ ಒಂದು ಪಾಶ್ರ್ವ ಹಾನಿಗೊಳಗಾಗಿದೆ. ನೂರಾರು ತೆಂಗಿನ ಮರಗಳು ಸಮುದ್ರದ ಅಲೆಗಳಿಗೆಸಿಲುಕಿ ಸಮುದ್ರಪಾಲಾಗಿದೆ.
ಸಮುದ್ರಕೊರೆತಕ್ಕೀಡಾಘಿರುವ ಪ್ರದೇಶದಲ್ಲಿ ಸ್ಥಳೀಯ ಅಂಬಿಕಾ ಗ್ರಂಥಾಲಯ ಮತ್ತು ಕ್ರೀಡಾ ಕ್ಲಬ್ ಕಾರ್ಯಕರ್ತರು ದಡದಲ್ಲಿ ಮರಳಿನ ಚೀಲಗಳನ್ನು ಪೇರಿಸಿಟ್ಟು ತಾತ್ಕಾಲಿಕ ರಕ್ಷಣಾಗೋಡೆ ನಿರ್ಮಿಸಿದ್ದಾರೆ.





