ಕಾಸರಗೋಡು: ಮಂಗಳೂರು-ಕಾಸರಗೋಡು ಮಧ್ಯೆ ಪ್ರಾಯೋಗಿಕ ಸಂಚಾರ ಆರಂಭಿಸಿದ ಕರ್ನಾಟಕ ಸಾರಿಗೆಯ ರಾಜಹಂಸ ಬಸ್ ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ದೊರಕಿದ್ದು, ಶೀಘ್ರವೇ ಇನ್ನೂ 4ಬಸ್ ಗಳು ಆರಂಭಿಸಲಾಗುವುದೆಂದು ಕರ್ನಾಟಕ ಕೆ ಎಸ್ ಆರ್ ಟಿ ಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ತಿಳಿಸಿದ್ದಾರೆ.
ಕಾಸರಗೋಡು-ಮಂಗಳೂರು ರೂಟಿನಲ್ಲಿ ಎರಡು ರಾಜಹಂಸ ಬಸ್ ಸಂಚಾರ ಆರಂಭಿಸಿದ ಹಿನ್ನೆಲೆಯಲ್ಲಿ ಈ ರೂಟಿನ ನಿತ್ಯ ಪ್ರಯಾಣಿಕರ ಬಳಗದ ವಾಟ್ಸಪ್ ಗುಂಪು ಸಹಯಾತ್ರಿ ಸದಸ್ಯರು ಅವರನ್ನು ಶಾಲು ಹೊದಿಸಿ ಗೌರವಿಸಿ ಅಭಿನಂಧಿಸಿದ ಸಂದರ್ಭ ಈ ಮಾಹಿತಿ ನೀಡಿದರು.
ಕಾಸರಗೋಡು ರೂಟಿನಲ್ಲಿ ಹೆದ್ದಾರಿ ಕಾಮಗಾರಿ ಮುಗಿದೊಡನೆ ದೀರ್ಘದೂರ ಮತ್ತು ನಿಯಮಿತ ನಿಲುಗಡೆಯ ಹೆಚ್ಚುವರಿ ಬಸ್ ಸಂಚಾರ ಆರಂಭಿಸಲಾಗುವುದೆಂದು ಈ ಹಿಂದೆ ಸಹಯಾತ್ರಿ ಮನವಿಗೆ ಅವರು ಭರವಸೆ ನೀಡಿದ್ದರು. ಇದನ್ನು ಪಾಲಿಸಿದ ಹಿನ್ನೆಲೆಯಲ್ಲವರನ್ನು ಗೌರವಿಸಲಾಯಿತು. ಬಸ್ ಸೇವೆಯ ಗುಣಮಟ್ಟವನ್ನು ಉತ್ತಮ ಪಡಿಸಲು ಸಹಯಾತ್ರಿ ಬಳದವರು ಸಲಹೆ, ಸೂಚನೆಗಳನ್ನಿತ್ತು ಸಹಕರಿಸುವಂತೆಯೂ ಅವರು ಬಯಸಿದರು. ಸಹಯಾತ್ರಿ ಬಳಗದ ಕಿಶೋರ್ ಏನಂಗೂಡ್ಲು, ಲೋಕೇಶ್ ಜೋಡುಕಲ್ಲು, ಶಿವಕೃಷ್ಣ ನಿಡುವಜೆ ಮೊದಲಾದವರು ವಿಭಾಗೀಯ ನಿಯಂತ್ರಣಾಧಿಕಾರಿ ಜತೆ ಮಾತನಾಡಿದರು.





