ಕಾಸರಗೋಡು: ಕಾಸರಗೋಡು ಗ್ರಂಥಾಲಯ ಸಭಾಂಗಣದಲ್ಲಿ ಕಲಾವಿದರ ಸಂಘಟನೆಯಾದ ಸ್ಟೇಜ್ ಆರ್ಟಿಸ್ಟ್ ಆಂಡ್ ವರ್ಕರ್ಸ್ ಅಸೋಸಿಯೇಶನ್ ಕೇರಳ(ಸವಾಕ್) ಕಾಸರಗೋಡು ಬ್ಲಾಕ್ ಸಮ್ಮೇಳನ ಭಾನುವಾರ ನಡೆಯಿತು. ಸಮ್ಮೇಳನದ ಅಧ್ಯಕ್ಷತೆಯನ್ನು ಕಾಸರಗೋಡು ಬ್ಲಾಕ್ ಅಧ್ಯಕ್ಷೆ ದಯಾ ಪಿಲಿಕ್ಕುಂಜೆ ವಹಿಸಿದ್ದರು. ಸಮ್ಮೇಳನವನ್ನು ಸವಾಕ್ ರಾಜ್ಯ ಖಜಾಂಚಿ ಮತ್ತು ಜಿಲ್ಲಾಧ್ಯಕ್ಷ ಉಮೇಶ್ ಎಂ. ಸಾಲಿಯಾನ್ ಉದ್ಘಾಟಿಸಿದರು.
ಸವಾಕ್ ರಾಜ್ಯ ಸಮಿತಿ ಸದಸ್ಯೆ ಮತ್ತು ಮಂಜೇಶ್ವರ ಗ್ರಾಮ ಪಂಚಾಯತಿ ಅಧ್ಯಕ್ಷೆ ಜೀನ್ ಲೆವಿನೋ ಮೊಂತೆರೊ ಮುಖ್ಯ ಅತಿಥಿಯಾಗಿದ್ದರು. ರಾಜ್ಯ ಸಮಿತಿ ಸದಸ್ಯ ನರಸಿಂಹ ಬಲ್ಲಾಳ್ ಮತ್ತು ಜಿಲ್ಲಾ ಕಾರ್ಯದರ್ಶಿ ಎಂ.ಎಂ. ಗಂಗಾಧರನ್ ಮಾತನಾಡಿ ಶುಭ ಹಾರೈಸಿದರು. ಸಮ್ಮೇಳನದಲ್ಲಿ "ಮಾದಕ ವಸ್ತು ವಿರೋಧಿ ಪ್ರತಿಜ್ಞೆ" ಸ್ವೀಕರಿಸಲಾಯಿತು.
ಸಮ್ಮೇಳನದಲ್ಲಿ ಅಧ್ಯಕ್ಷ ನರಸಿಂಹ ಬಲ್ಲಾಳ್, ಕಾರ್ಯದರ್ಶಿ ನಾರಾಯಣ ಶೆಟ್ಟಿ ಮತ್ತು ಖಜಾಂಚಿ ಜಯಂತಿ ಸುವರ್ಣ ಅವರನ್ನು ನೂತನ ಪದಾಧಿಕಾರಿಗಳಾಗಿ ಆಯ್ಕೆ ಮಾಡಲಾಯಿತು. ಈ ಸಂದರ್ಭ ಎಸ್ಸೆಲ್ಸಿ ಹಾಗೂ ಇತರ ತರಗತಿಗಲಲ್ಲಿ ಅತ್ಯಧಿಕ ಅಂಕಗಳಿಸಿದ ಸವಾಕ್ ಸದಸ್ಯರ ಮಕ್ಕಳನ್ನು ಸನ್ಮಾನಿಸಲಾಯಿತು. ವಿವಿಧ ಕಲಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ನರೇಂದ್ರ ಪ್ರಸಾದ್ ಸ್ವಾಗತಿಸಿ, ನಾರಾಯಣ ಶೆಟ್ಟಿ ವಂದಿಸಿದರು.




.jpg)
.jpg)
.jpg)
