ಕಾಸರಗೋಡು: ಜೈ ತುಲುನಾಡ್ (ರಿ) ಕಾಸರಗೋಡು ವಲಯ ಸಮಿತಿಯ ವತಿಯಿಂದ'ಲ್ಲಿ 'ಮರಪಂದಿ ಆಟಿ'ವಿಶೇಷ ಕರ್ಯಕ್ರಮ ಕಾಸರಗೋಡು ಕರಂದಕ್ಕಾಡ್‍ನಲ್ಲಿರುವ ಬಿಲ್ಲವ ಸಮಾಜ ಸೇವಾ ಸಂಘದ ಸಭಾಂಗಣದಲ್ಲಿ ಜರುಗಿತು. ಬಿಲ್ಲವ ಸೇವಾ ಸಂಘದ ಅಧ್ಯಕ್ಷ ರಘು ಮೀಪುಗುರಿ ಸಮಾರಂಭ ಉದ್ಘಾಟಿಸಿದರು.
ಕಾರ್ಯಕ್ರಮದ ಅಂಗವಾಗಿ ಮಕ್ಕಳ ತುಲು ಭಾಷಣ ಸೇರಿದಂತೆ ವಿವಿಧ ಸ್ಪರ್ಧೆ ನಡೆಯಿತು. ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಜೈ ತುಲುನಾಡ್ ಕಾಸರಗೋಡು ವಲಯ ಸಮಿತಿಯ ಅಧ್ಯಕ್ಷೆ ಕುಶಲಾಕ್ಷಿ.ವಿ.ಕುಲಾಲ್ ಕಣ್ವತೀರ್ಥ ಅಧ್ಯಕ್ಷತೆ ವಹಿಸಿದ್ದರು.
ಜೈ ತುಲುನಾಡ್ ಕಾಸರಗೋಡು ಸಮಿತಿಯ ಸದಸ್ಯ, ತುಲು ಬರಹಗಾರ ಉಮೇಶ್ ಸಾಲಿಯಾನ್ ಶಿರಿಯಾ ಆಟಿಯ ವಿಶೆಷತೆ ಬಗ್ಗೆ ಮಾಹಿತಿ ನೀಡಿದರು.
ಯಕ್ಷಗಾನ ಹಾಗೂ ರಂಗ ಕಲಾವಿದ ವಾಸು ಬಾಯಾರ್ ಅವರು ಮುಖ್ಯ ಅತಿಥಿಯಾಘಿ ಭಾಗವಹಿಸಿ ಮಾತನಾಡಿ, ತುಲು ಭಾಷೆಗೆ ಪ್ರಾದೇಶಿಕ ಭಾಷೆಯಾಗಿ ಮಾನ್ಯತೆ ಜತೆಗೆ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸೇರ್ಪಡೆಯಾಗುವ ನಿಟ್ಟಿನಲ್ಲಿ ಮಹತ್ವದ ಹೋರಾಟ ಅನಿವಾರ್ಯ. ತುಲು ಲಿಪಿಯನ್ನು ಮನೆ ಮನೆಗೆ ತಲುಪಿಸುವಲ್ಲಿ ಜೈ ತುಲುನಾಡ್ ಸಂಘಟನೆಯ ಶ್ರಮ ಶ್ಲಾಘನೀಯ ಎಂದು ತಿಳಿಸಿದರು. ಜೈ ತುಲುನಾಡ್ ಕೇಂದ್ರ ಸಮಿತಿಯ ಅಧ್ಯಕ್ಷ ಉದಯ ಪೂಂಜ ತಾರಿಪಾಡಿ ಗುತ್ತು ಅತಿಥಿಯಾಗಿ ಭಾಗವಹಿಸಿದ್ದರು. ಪಾರ್ದನ ಹಾಡಿದ ಅಶ್ವಿನಿ ರೈ ಕಾರಿಂಜ ಹಾಗೂ ತುಲು ಲಿಪಿ ಶಿಕ್ಷಕ ವಿನೋದ್ ಪ್ರಸಾದ್ ರೈ ಅವರನ್ನು ಗೌರವಿಸಲಾಯಿತು. ಸದಸ್ಯರುಗಳಾದ ಶ್ರೀ ಯಜ್ಞೇಶ್ ಮತ್ತು ಶ್ರೀಮತಿ ಪ್ರೇಮಾ ಎಂ ಕಣ್ವತೀರ್ಥ, ಉತ್ತಮ್, ಚಂದ್ರಹಾಸ ತಲಪಾಡಿ, ರಾಜಶ್ರೀ ತಲಪಾಡಿ, ಕಿರಣ್ ತುಲುವ, ಪ್ರಕಾಶ್ ಶೆಟ್ಟಿ ಕುಡ್ಲ, ಸವಿತಾ ಕರ್ಕೇರಾ, ಚಿತ್ರಾಕ್ಷಿ , ನವೀನ್ ಚಿಪ್ಪಾರು ಸಹಕರಿಸಿದರು.
ಕಾಸರಗೋಡು ವಲಯ ಸಮಿತಿಯ ಕಾರ್ಯದರ್ಶಿ ಶ್ರೀ ಹರಿಕಾಂತ ಕಾಸರಗೋಡು ಸ್ವಾಗತಿಸಿದರು. ವಿನೋದ್ ಪ್ರಸಾದ್ ರೈ ಕಾರಿಂಜ ಮತ್ತು ಶ್ರೀಯುತ ಶ್ರೀನಿವಾಸ ಆಳ್ವ ಕಳತ್ತೂರು ನಿರೂಪಿಸಿದರು.ಜೈ ತುಲುನಾಡ್ ರಿ ಕಾಸರಗೋಡು ಉಪಾಧ್ಯಕ್ಷ ಪ್ರವೀಶ್ ಕುಲಾಲ್ ಬೀರಿಕುಂಜ ವಂದಿಸಿದರು. ಸಾರ್ವಜನಿಕರ ಪದ ರಂಗಿತ, ಸಬಿ ಸವಾಲು ಕಾರ್ಯಕ್ರಮದೊಂದಿಗೆ ಆಟಿಯ ವಿಶಿಷ್ಟ ಬೋಜನವನ್ನು ಉಣಬಡಿಸಲಾಯಿತು.





