ಕಾಸರಗೋಡು: ಸಂಗೀತ ಮತ್ತು ಸಂಸ್ಕøತಿ ಮಧ್ಯೆ ಅವಿನಾಭಾವ ಸಂಬಂಧವಿದ್ದು, ಆರೋಗ್ಯವಂತ ಸಮಾಜಕ್ಕೆ ಇವೆರಡೂ ಪೂರಕವಾಗಿರುವುದಾಗಿ ಚಲನಚಿತ್ರ ನಟಿ ಶೋಭಾ ಶೆಟ್ಟಿ ತಿಳಿಸಿದ್ದಾರೆ. ಅವರು ಕಾಸರಗೋಡು ರಂಗ ಚಿನ್ನಾರಿಯ ಸಂಗೀತ ಘಟಕ ಸ್ವರಚಿನ್ನಾರಿ ವತಿಯಿಂದ ಕರಂದಕ್ಕಾಡುಪದ್ಮಗಿರಿ ಕಲಾಕುಟೀರದಲ್ಲಿ ಆಯೋಜಿಸಲಾಗಿದ್ದ 'ಸಿ. ಅಶ್ವಥ್ ಗಾನ ನಮನ'ಕಾರ್ಯಕ್ರಮ ಪ್ರತಿಭಾನ್ವಿತ ಕರೋಕೆ ಗಾಯಕರ ಸಮ್ಮಿಲನ 'ಅಂತಧ್ರ್ವನಿ-6'ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಂಗೀತ ಕಲಿಕೆಗೆ ಕಠಿಣ ಪರಿಶ್ರಮ ಅಗತ್ಯ. ರಾಗ, ತಾಳ, ಪಲ್ಲವಿ ಮುಂತಾದ ಅಂಶಗಳನ್ನು ಗಮನದಲ್ಲಿರಿಸಿ ಹಾಡಿದಾಗ ಉತ್ತಮ ಸಂಗೀತ ಹೊರಹೊಮ್ಮಲು ಸಾಧ್ಯ. ಕನ್ನಡ ಭಾಷೆ, ಸಂಸ್ಕøತಿ, ಸಾಃಇತ್ಯದ ಜತೆಗೆ ಸಂಗೀತದ ಬೆಳವಣಿಗೆಗೆ ಶ್ರಮವಹಿಸುತ್ತಿರುವ ರಂಗಚಿನ್ನಾರಿ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು. ರಂಗ ಚಿನ್ನಾರಿ ನಿರ್ದೇಶಕರಲ್ಲಿ ಒಬ್ಬರಾದ ಸತೀಶ್ಚಂದ್ರ ಭಂಡಾರಿ ಕೋಳಾರು ಅಧ್ಯಕ್ಷತೆ ವಹಿಸಿದ್ದರು. ಲೇಖಕಿ ವಿಜಯಲಕ್ಷ್ಮೀ ಶ್ಯಾನುಭಾಗ್, ರಂಗನಟ ಉದಯ ಕುಮಾರ್ ಮನ್ನಿಪ್ಪಾಡಿ, ಜನಾರ್ದನ, ಪ್ರದೀಪ್ ಬೇಕಲ್ ಉಪಸ್ಥಿತರಿದ್ದರು.
ರಂಗಚಿನ್ನಾರಿ ಸಂಸ್ಥೆ ಪ್ರಧಾನ ಸಂಚಾಲಕ ಕಾಸರಗೋಡು ಚಿನ್ನಾ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಕಾರ್ಯಕ್ರಮದ ಅಂಗವಾಗಿ ಹಲವು ಮಂದಿ ಕಲಾವಿದರು ಗಾಯನದ ಮೂಲಕ ಸಿ. ಅಶ್ವಥ್ ಅವರಿಗೆ ನಮನ ಸಲ್ಲಿಸಿದರು. ಸಾಹಿತಿ ವೈ. ಸತ್ಯನಾರಾಯಣ ಹಾಗೂ ವಕೀಲ ಎ.ಎನ್ ಅಶೋಕ್ ಕುಮಾರ್ ಸಮಾರೋಪ ಮಾತುಗಳನ್ನಾಡಿದರು.





