ಕಾಸರಗೋಡು: ಕೇರಳ ಎನ್. ಜಿ. ಓ ಯೂನಿಯನ್ ನೇತೃತ್ವದಲ್ಲಿ, ರಾಜ್ಯ ನೌಕರರು ವಿವಿಧ ಬೇಡಿಕೆ ಮುಮದಿರಿಸಿ ಕಾಸರಗೋಡು ಸೇರಿದಂತೆ ರಾಜ್ಯದ 51ಕೇಂದ್ರಗಳಲ್ಲಿ ಧರಣಿ ನಡೆಸಿದರು.
ಕೇಂದ್ರ ಸರ್ಕಾರದ ಜನವಿರೋಧಿ ಮತ್ತು ಕಾರ್ಮಿಕ ವಿರೋಧಿ ನೀತಿ ಸರಿಪಡಿಸಬೇಕು, ಕೇಂದ್ರ-ರಾಜ್ಯ ಆರ್ಥಿಕ ಸಂಬಂಧಗಳನ್ನು ಪುನರ್ ಸಂಘಟಿಸಬೇಖು, ಕೇರಳಕ್ಕೆ ಮಾರಕವಾಗಿರುವ ಕೇಂದ್ರ ನೀತಿ ಬದಲಾಯಿಸಬೇಕು, ಪಿಎಫ್‍ಆರ್‍ಡಿಎ ಯನ್ನು ಹಿಂತೆಗೆದುಕೊಳ್ಳಬೇಖು ಮುಂತಾದ ಬೇಡಿಕೆ ಮುಂದಿರಿಸಿ ಧರಣಿ ನಡೆಯಿತು.
ಜಿಲ್ಲಾ ಪಂಚಾಯಿತಿ ಕಚೇರಿ ವಠಾರದಿಂದ ಆದಾಯ ತೆರಿಗೆ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಕಚೇರಿ ಎದುರು ನಡೆದ ಧರಣಿಯನ್ನು ಒಕ್ಕೂಟದ ರಾಜ್ಯ ಸಮಿತಿ ಸದಸ್ಯೆ ಪಿ.ಆರ್. ಸ್ಮಿತಾ ಉದ್ಘಾಟಿಸಿದರು. ಒಕ್ಕೂಟದ ಜಿಲ್ಲಾಧ್ಯಕ್ಷ ಪಿ.ಕೆ. ವಿನೋದ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪಿ.ವಿ. ಮಹೇಶ್ ಕುಮಾರ್, ಕೆ ವಿನೋದ್ ಕುಮಾರ್, ಟಿ ವಿ ಹೇಮಲತಾ ಮತ್ತು ಕೆ ವಿ ಶ್ರೀಕುಮಾರ್ ನೇತೃತ್ವ ವಹಿಸಿದ್ದರು. ವಿ ಜಗದೀಶ್ ಸ್ವಾಗತಿಸಿದರು. ಎಂ ಜಿತೇಶ್ ವಂದಿಸಿದರು.




