ಕಾಸರಗೋಡು: ಜಿಲ್ಲಾ ಕ್ರೀಡಾ ಕ್ಲಬ್ ನೇತೃತ್ವದಲ್ಲಿ ಆಲ್ ಕೇರಳ ಛಾಯಾಗ್ರಾಹಕರ ಸಂಘವು(ಎಕೆಪಿಎ) ಜಿಲ್ಲಾ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಆಯೋಜಿಸಿತು. ಕಾಞಂಗಾಡ್‍ನ ಚಾಲಿಂಗಲ್‍ನ ನಂಬಿಯರಡ್ಕ ಒಳಾಂಗಣ ಕೋರ್ಟ್ ಮೈದಾನದಲ್ಲಿ ಆಯೋಜಿಸಲಾದ ಸ್ಪರ್ಧೆಯಲ್ಲಿ ಜಿಲ್ಲೆಯ 7 ತಂಡಗಳು ಭಾಗವಹಿಸಿತ್ತು.
ಸ್ಪರ್ಧೆಯಲ್ಲಿ, ರಾಜಪುರಂ ಪ್ರದೇಶದ ಮಹೇಶ್-ಸಾಲ್ವಿನ್ ತಂಡ ಪ್ರಥಮ, ಕಾಞಂಗಾಡ್ ಪ್ರದೇಶದ ಸಜಿತ್-ವೈಶಾಖ್ ತಂಡ ದ್ವಿತೀಯ ಮತ್ತು ರಾಜಪುರಂ ಪ್ರದೇಶದ ಸಿಬಿ-ಬೆನ್ ಸೆಬಾಸ್ಟಿಯನ್ ತಂಡ ತೃತೀಯ ಸ್ಥಾನ ಗಳಿಸಿತು. ಬಹುಮಾನ ವಿತರಣಾ ಸಮಾರಂಭವನ್ನು ರಾಜ್ಯ ಸಮಿತಿ ಕಾರ್ಯದರ್ಶಿ ಹರೀಶ್ ಪಾಲಕುನ್ನು ಉದ್ಘಾಟಿಸಿದರು. ಸಂಘಟನೆ ಜಿಲ್ಲಾಧ್ಯಕ್ಷ ಸುಗುಣನ್ ಇರಿಯಾ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕಾರ್ಯದರ್ಶಿ ಹರೀಶ್ ಪಾಲಕುನ್ನು ವಿಜೇತರಿಗೆ ಟ್ರೋಫಿ ವಿತರಿಸಿದರು ರಾಜ್ಯ ಮಹಿಳಾ ವಿಭಾಗದ ಸಂಯೋಜಕ ಪ್ರಶಾಂತ್ ತೆಕ್ಕಡಪ್ಪುರ ನಗದು ಬಹುಮಾಮ ವಿತರಿಸಿದರು. ಜಿಲ್ಲಾ ಕಾರ್ಯದರ್ಶಿ ರಾಜೇಂದ್ರನ್, ಜಿಲ್ಲಾ ಕೋಶಾಧಿಕಾರಿ, ಜಿಲ್ಲಾ ಸ್ವ-ಸಹಾಯ ಗುಂಪಿನ ಸಂಯೋಜಕ ಕೆ.ಸಿ. ಅಬ್ರಹಾಂ, ಜಿಲ್ಲಾ ರಕ್ತದಾನ ಸಂಯೋಜಕ ಅನಿಲ್ ಅಪ್ಪೂಸ್, ರಾಜಪುರಂ ಪ್ರಾದೇಶಿಕ ಕಾರ್ಯದರ್ಶಿ ರೆನೀ ಚೆರಿಯನ್, ಜಿಲ್ಲಾ ರಕ್ತದಾನ ಉಪ-ಸಂಯೋಜಕ ಸುರೇಶ್ ಬಿಜೆ ಉಪಸ್ಥಿತರಿದ್ದರು.
ಸ್ಪೋಟ್ರ್ಸ್ ಕ್ಲಬ್ ಸಂಯೋಜಕ ರತೀಶ್ ಸ್ವಾಗತಿಸಿದರು. ಕಾಂಞಂಗಾಡ್ ಪ್ರಾದೇಶಿಕ ಕಾರ್ಯದರ್ಶಿ ಸುರೇಶ್ ಫೆÇೀಟೋ ಪ್ಲಸ್ ವಂದಿಸಿದರು.





