ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಯೋಜನೆ ಕಾಮಗಾರಿಯ ಗುತ್ತಿಗೆ ಸಂಸ್ಥೆ ಸೂಪರ್‍ವೈಸರ್ ಮೂಲತ: ಆಂಧ್ರಪ್ರದೇಶ ವಾಲಿಯಾನಗರ ಜಿಲ್ಲೆ ಕೋನಾ ಗ್ರಾಮ ನಿವಾಸಿ ಗೋವರ್ಧನರಾವ್(30)ಎಂಬವರ ಮೃತದೇಹ ಅವರು ವಾಸಿಸುತ್ತಿರುವ ಪೆರಿಯಾಟಡ್ಕದ ಖಾಸಗಿ ಕಟ್ಟಡವೊಮದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇತರ ಇಬ್ಬರು ಕಾರ್ಮಿಕರೊಂದಿಗೆ ಗೋವರ್ಧನ ರಾವ್ ಕೊಠಡಿಯಲ್ಲಿ ವಾಸಿಸುತ್ತಿದ್ದು, ಒಬ್ಬಾತ ಊರಿಗೆ ತೆರಳಿದ್ದರೆ, ಇನ್ನೊಬ್ಬ ಕೆಲಸಕ್ಕೆ ತೆರಳಿದ ನಂತರ ಕೃತ್ಯವೆಸಗಿರಬೇಕೆನ್ನಲಾಗಿದೆ. ಬಹಳ ಹೊತ್ತಿನ ವರೆಗೂ ಸೈಟಿಗೆ ಬಾರದ ಹಿನ್ನೆಲೆಯಲ್ಲಿ ಇವರ ಜತೆ ಕೆಲಸ ನಿರ್ವಹಿಸುತ್ತಿದ್ದ ಸಿಬ್ಬಂದಿ ಮೊಬೈಲ್‍ಗೆ ಕರೆಮಾಡಿದರೂ ಸ್ವೀಕರಿಸದಿದ್ದಾಗ ಸಂಶಯಗೊಂಡು ಕೊಠಡಿಗೆ ತೆರಳಿ ನೋಡಿದಾಗ ನೇಣಿನಲ್ಲಿ ನೇತಾಡುತ್ತಿರುವುದು ಕಂಡುಬಂದಿತ್ತು. ಬೇಕಲ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.




