ಕಾಸರಗೋಡು: ಕಾಞಂಗಾಡ್ ದಕ್ಷಿಣದಲ್ಲಿ ಎಚ್‍ಪಿಸಿಎಲ್ ಟ್ಯಾಂಕರ್ ಲಾರಿ ಪಲ್ಟಿಯಾಗಿದ್ದ ಟ್ಯಾಂಕರ್ ಮೇಲಕ್ಕೆತ್ತುವ ಕಾರ್ಯಾಚರಣೆ ಶುಕ್ರವಾರ ರಾತ್ರಿ ವೇಳೆಗೆ ಪೂರ್ಣಗೊಂಡಿದೆ. ಈ ಟ್ಯಾಂಕರ್‍ನಿಂದ ಅಡುಗೆಅನಿಲ ಸ್ಥಳಾಂತರಿಸಲು ಮೂರು ಟ್ಯಾಂಕರ್‍ಗಳು ಸಿದ್ಧವಾಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಮೇಲ್ನೋಟದಲ್ಲಿ ಕಾರ್ಯಾಚರಣೆ ಮುಂದುವರಿಯುತ್ತಿದೆ. ಟ್ಯಾಂಕ್‍ನ ವಾಲ್ವ್‍ನಲ್ಲಿಕಂಡು ಬಂದಿದ್ದ ಸೋರಿಕೆ ತಡೆಗಟ್ಟಲಾಗಿದೆ. ಜನಪ್ರತಿನಿಧೀಗಳು, ಕೆಎಸ್‍ಇಬಿ, ಮೋಟಾರ್ ವಾಹನ, ಆರೋಗ್ಯ, ಮತ್ತು ಎಚ್‍ಪಿಸಿಎಲ್ ಕ್ಷಿಪ್ರ ಕಾರ್ಯಾಚರಣೆ ತಂಡ ಸ್ಥಳಕ್ಕೆ ತಲುಪಿದ್ದು, ಕಾರ್ಯಾಚರಣೆ ಮೇಲ್ನೋಟ ವಹಿಸುತ್ತಿದೆ. ಟ್ಯಾಂಕರ್ ಮೇಲೆತ್ತುವ ಸಂದರ್ಭ ಸೋರಿಕೆಯನ್ನು ಕಂಡುಬಂದಿದ್ದು, ಮಂಗಳೂರಿನಿಂದ ಆಗಮಿಸಿದ್ದ ಎಚ್‍ಪಿಸಿಎಲ್ ತಂಡ ಕಾರ್ಯಾಚರಣೆ ನಡೆಸಿದೆ. ಪ್ರಸಕ್ತ ಎರಡು ಶಿಬಿರಗಳನ್ನು ತೆರೆಯಲಾಗಿದೆ. ಘಟನಾ ಸ್ಥಳದಿಂದ ಒಂದು ಕಿಲೋಮೀಟರ್ ವ್ಯಾಪ್ತಿಯೊಳಗಿನ ಕುಟುಂಬಗಳಿಗೆ ಮುತ್ತಪ್ಪನ್ ಮಾಹಿತಿ ನೀಡಿದ್ದಾರೆ.ಅವರನ್ನು ಕಾವ್ ಆಡಿಟೋರಿಯಂ ಮತ್ತು ಅರಂಗಡಿ ಜಿಎಲ್‍ಪಿಎಸ್‍ಗೆ ಸ್ಥಳಾಂತರಿಸಲಾಯಿತು. ಕೆಲವರು ಸಂಬಂಧಿಕರ ಮನೆಗಳಿಗೆ ಸ್ಥಳಾಂತರಗೊಂಡರು. ಆ ಪ್ರದೇಶದಲ್ಲಿ ಅಂಗಡಿಗಳು ಮತ್ತು ಮಾರುಕಟ್ಟೆಗಳು ಮುಚ್ಚಲಾಘಿದ್ದು, ಕೆಎಸ್‍ಇಬಿ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಿದೆ.





