ಕಾಸರಗೋಡು: ಉಪ್ಪಳ ಮಣ್ಣಂಗುಳಿ ನಿವಾಸಿ, ಮಣ್ಣಂಗುಳಿಯ ಫ್ಲ್ಯಾಟ್‍ನಲ್ಲಿ ವಾಸಿಸುತ್ತಿದ್ದ ಅಬ್ದುಲ್ ಮುತ್ತಲೀಬ್ ಯಾನೆ ಮುತ್ತಲೀಬ್ ಕೊಲೆ ಪ್ರಕರಣದ ಆರೋಪಿ, ಭದ್ರಾವತಿ ನಿವಾಸಿ ಸಯ್ಯದ್ ಆಸಿಫ್ ಎಂಬಾತನನ್ನು ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ(ತೃತೀಯ)ನ್ಯಾಯಾಧೀಶರು ಖುಲಾಸೆಗೊಳಿಸಿದ್ದಾರೆ.
2013 ಅ. 24ರಂದು ತಡರಾತ್ರಿ ಉಪ್ಪಳ ಮಣ್ಣಂಗುಳಿ ಫ್ಲ್ಯಾಟ್ ಸನಿಹ ಮುತ್ತಲೀಬ್ ಕೊಲೆ ನಡೆದಿದ್ದು, ಈ ಬಗ್ಗೆ ಕಾಲಿಯಾ ರಫೀಕ್ ಹಾಗೂ ಇತರ ಐವರ ವಿರುದ್ಧ ಪೊಲೀಸರು ಕೇಸು ದಆಖಳಿಸಿಕೊಂಡಿದ್ದರು. ಪ್ರಥಮ ಆರೋಪಿ ಕಾಲಿಯಾ ರಫೀಕ್ ಹಾಗೂ ಎರಡನೇ ಆರೋಪಿ ಶಂಸುದ್ದೀನ್ ಎಂಬವರಿಗೆ ಈಗಾಗಲೇ ಶೀಕ್ಷೆ ವಿಧಿಸಲಾಗಿದೆ. ಮೂರು ಮತ್ತು ನಾಲ್ಕನೇ ಆರೋಪಿಗಳನ್ನು ಈ ಹಿಂದೆ ಖುಲಾಸೆಗೊಳಿಸಲಾಗಿದ್ದು, ಐದನೇಏ ಆರೋಪಿ ಸಯ್ಯದ್ ಆಸಿಫ್‍ನನ್ನೂ ಬಿಡುಗಡೆಗೊಳಿಸಲಾಗಿದೆ.




