ಕಾಸರಗೋದು: ಬೇಕಲ ಸನಿಹದ ಅರವತ್ ಮುಕ್ಕುಂಡು ಬಯಲಲ್ಲಿ ಎರಡು ದಿವಸಗಳಿಂದ ನಡೆದ ಭತ್ತದ ಬೇಸಾಯ 'ನಾಟಿ ಉತ್ಸವ'ಸಂಪನ್ನಗೊಂಡಿತು. ಪುಲರಿ ಅರವತ್ ಸಂಘಟನೆಎ ಹಾಘೂ ಉದುಮ ಗ್ರಾಮ ಪಂಚಾಯಿತಿ ಜೀವವೈವಿಧ್ಯ ನಿರ್ವಹಣಾ ಸಮಿತಿಯ ಸಹಯೋಗದೊಂದಿಗೆ ನಾಟಿ ಉತ್ಸವ ಆಯೋಜಿಸಲಾಗಿತ್ತು. ಉದುಮ ಶಾಸಕ ಸಿ.ಎಚ್.ಕುಂಜಂಬು ಸಮಾರಂಭ ಉದ್ಘಾಟಿಸಿದರು. ಉದುಮ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಕೆ.ವಿ. ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಶಾಲೆಗಳ ಮಕ್ಕಳು ಹದಗೊಳಿಸಿದ ಹೊಲಗಳಲ್ಲಿ ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರ ಜತೆಗೆ ನೇಜಿ ನೆಡುವ ಮೂಲಕ ಸಂಭ್ರಮಿಸಿದರು.
ಪಳ್ಳಿಕೆರೆ ಗ್ರಾಮ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಎ ಮಣಿಕಂದನ್, ಉದುಮ ಗ್ರಾಮ ಪಂಚಾಯಿತಿ ಸದಸ್ಯೆ ಪುಷ್ಪಾವತಿ ಪಿ ಆರ್, ಬಿಎಂಸಿ ಸದಸ್ಯರಾದ ವಿನೋದ್ ಮೇಲ್ಪುರಂ ಮತ್ತು ಜಗದೀಶ್ ಆರಟ್ಟು ಕಡವು ಉಪಸ್ಥಿತರಿದ್ದರು. ನಾಟಿ ಸಂಘಟನಾ ಸಮಿತಿಯ ಅಧ್ಯಕ್ಷ ಕೆ. ದಾಮೋದರನ್ ಸ್ವಾಗತಿಸಿದರು ಮತ್ತು ಉಪಾಧ್ಯಕ್ಷ ರಾಜೇಶ್ ಕುಮಾರ್ ಕೆ. ವಂದಿಸಿದರು.
ಹೊಲದಲ್ಲಿ ನೇಜಿ ನೆಡುವ ಮೊದಲು ಸಾಂಪ್ರದಾಯಿಕ ಬೇಸಾಯದ ಬಗ್ಗೆ ಪ್ರಗತಿಪರ ಕೃಷಿಕರು, ಕೃಷಿ ಅಧಿಕಾರಿಗಳು ಈ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಈ ಸಂದರ್ಭ ವಿದ್ಯಾರ್ಥಿಗಳು ಗದ್ದೆ ವಠಾರದಲ್ಲಿ ವಿವಿಧ ಪ್ರಬೇದಗಳ ಸಸಿಗಳನ್ನು ನೆಟ್ಟರು. ಕಾಸರಗೋಡು ಜಿಲ್ಲೆಯ ವಿವಿಧ ಶಿಕ್ಷಣ ಸಂಸ್ಥೆಗಳಿಂದ ಆಗಮಿಸಿದ ಸುಮಾರು 500 ಮಂದಿ ವಿದ್ಯಾರ್ಥಿಗಳು ನಾಟಿ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ಹಾಗೂ ಕೃಷಿಕಾಯಕದಲ್ಲಿ ನಿರತರಾದವರಿಗೆ ಪ್ರಶಸ್ತಿಯನ್ನು ಸಂಸದ ರಾಜ್‍ಮೋಹನ್ ಉಣ್ಣಿತಾನ್ ವಿತರಿಸಿದರು. ಕಾಸರಗೋಡು ಜಿಲ್ಲೆಯ ಅಪರೂಪದ ಜೀವವೈವಿಧ್ಯತೆ ಸಂರಕ್ಷಿಸುತ್ತಿರುವ ರೈತರನ್ನು ಸನ್ಮಾನಿಸಲಾಯಿತು.






